ಬೆಂಗಳೂರು : ಭಾರತದಲ್ಲಿ ಮೋಟೋ ಸ್ಪರ್ಧೆಗಳನ್ನು ಏರ್ಪಡಿಸುವ ಪ್ರಮುಖ ಆಡಳಿತ ಸಂಸ್ಥೆಯಾಗಿರುವ ಫೆಡರೇಶನ್ ಆಫ್ ಮೋಟೋ ಸ್ಪೋರ್ಸ್ ಕ್ಲಬ್ ಆಫ್ ಇಂಡಿಯಾ ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಮೋಟೋ ಸ್ಪೋರ್ಸ್ ಆಫೀಸಿಯಲ್ ಪರೀಕ್ಷೆಯಲ್ಲಿ ಕಾರ್ಕಳ ಬಂಗ್ಲೆಗುಡ್ಡೆಯ ಪ್ರತಿಕ್ ಪಿ. ಭಂಡಿ ಉನ್ನತ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಈ ಮೂಲಕ ನವದೆಹಲಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟೀಯ ಮಟ್ಟದ ಮೋಟೋ ಜಿಪಿ ಸ್ಪರ್ಧೆಯಲ್ಲಿ ಪ್ರಧಾನ ಪರಿವೀಕ್ಷಕರಾಗಿ ಪ್ರತೀಕ್ ಭಂಡಿ ಕಾರ್ಯನಿರ್ವಹಿಸಲಿದ್ದಾರೆ. ಬಿ.ಇ ಪದವೀಧರರಾಗಿರುವ ಇವರು ನಿವೃತ್ತ ಎಲ್‌ಐಸಿ ಆಫೀಸರ್ ಪದ್ಮನಾಭ ಹಾಗೂ ಜ್ಞಾನಸುಧಾ ವಿದ್ಯಾಸಂಸ್ಥೆಯ ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ ಅವರ ಪುತ್ರ.
ಎಫ್‌ಎಂಎಸ್‌ಸಿಐ – ಮುಖ್ಯ ಪರಿವೀಕ್ಷಕರಾಗಿ ಕಾರ್ಕಳದ ಪ್ರತೀಕ್ ಆಯ್ಕೆ
