ಇಂದು ಪ್ರಧಾನಿ ಮೋದಿ @ 73 : ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ ಅಭಿಯಾನ

ಬಿಜೆಪಿಯಿಂದ ಅ.2ರ ತನಕ ವಿವಿಧ ಸೇವಾ ಕಾರ್ಯಗಳು

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಇಂದು 73ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ನಿಮಿತ್ತ ಸರಕಾರ ಮತ್ತು ಬಿಜೆಪಿ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ. ಸೆ.17ರಿಂದ ತೊಡಗಿ ಅ.2ರ ತನಕ ಸೇವಾ ಕಾಯಗಳು ನಡೆಯಲಿವೆ.
ಪ್ರಧಾನಿ ಮೋದಿ ತಮ್ಮ ಜನ್ಮದಿನವನ್ನು ಸೇವಾ ಮತ್ತು ಜನ ಕಲ್ಯಾಣಕ್ಕೆ ಮೀಸಲಿಟ್ಟಿದ್ದಾರೆ. ಹಾಗಾಗಿ ದೇಶಕ್ಕೆ ಸೇವೆ ಸಲ್ಲಿಸಲು ಭಾರತೀಯ ನಾಗರಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ‘ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ’ ಎಂಬ ವಿಶೇಷ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ.
ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ‘ಸೇವೆಯ ಉಡುಗೊರೆ’ ಆಗಿ ತಮ್ಮ ಸೇವಾ ಭಾವವನ್ನು ವ್ಯಕ್ತಪಡಿಸಬಹುದಾಗಿ. ಅದು ನಮೋ ಆ್ಯಪ್ ಬಳಕೆದಾರರಾಗಿರಬಹುದು, ಕಾರ್ಯಕರ್ತರಾಗಿರಬಹುದು ಅಥವಾ ಇತರ ಯಾರು ಬೇಕಾದರು ಆಗಿರಬಹುದು.
ಈ ಉಡುಗೊರೆ ಭಾರತೀಯರಲ್ಲಿ ಹೆಮ್ಮೆ ಮತ್ತು ಸಾಧನೆಯ ಭಾವವನ್ನು ಹುಟ್ಟುಹಾಕುವುದಲ್ಲದೆ, ರಾಷ್ಟ್ರದ ಸೇವೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ನಾಯಕರನ್ನು ಸ್ಮರಿಸಲು ಇದಕ್ಕಿಂತ ಉತ್ತಮವಾದ ದಿನವಿಲ್ಲ.
ನಮೋ ಆಪ್‌ನ ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಬಳಸಿಕೊಂಡು ಪ್ರತಿಜ್ಞೆ ಮತ್ತು ಸೇವೆಯನ್ನು ದಾಖಲು ಮಾಡಲಾಗುತ್ತದೆ.
ನಿಮ್ಮ ಸೇವಾ ಭಾವ ಅಭಿಯಾನದ ಮೂಲಕ ಸೇವಾ ಚಟುವಟಿಕೆಗಳ ಫೋಟೋಗಳನ್ನು ಅಪ್ ಲೋಡ್ ಮಾಡಬಹುದು. 9 ವಿಭಿನ್ನ ಸೇವಾ ಚಟುವಟಿಕೆಗಳಿವೆ. ಸೇವಾ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಪಡೆದ ಬ್ಯಾಡ್ಜ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರೊಂದಿಗೆ ಇತರರನ್ನು ಪ್ರೇರೆಪಿಸಬಹುದಾಗಿದೆ.
9 ವಿಭಿನ್ನ ಸೇವಾ ಚಟುವಟಿಕೆ ಹೀಗಿವೆ : ಆತ್ಮನಿರ್ಭರ್, ರಕ್ತದಾನ, ಮಳೆ ನೀರು ಸಂಗ್ರಹ, ಲೀಡಿಂಗ್ ಡಿಜಿಟಲ್ ಇಂಡಿಯಾ, ಏಕ್ ಭಾರತ್ ಶ್ರೇಷ್ಠ ಭಾರತ್, ಲೈಫ್: ಪ್ರೊ-ಪ್ಲಾನೆಟ್ ಪೀಪಲ್, ಸ್ವಚ್ಛ ಭಾರತ, ಕ್ಷಯ ಮುಕ್ತ ಭಾರತ
ವೋಕಲ್​ ಫಾರ್​​ ಲೋಕಲ್.
ಸ್ಥಳೀಯವಾಗಿ ಕೂಡ ಬಿಜೆಪಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಕ್ತದಾನ, ಸ್ವಚ್ಛತಾ ಅಭಿಯಾನ, ಅಶಕ್ತರಿಗೆ ನೆರವು ಮುಂತಾದ ಕಾರ್ಯಗಳು ಬಿಜೆಪಿ ವತಿಯಿಂದ ನಡೆಯಲಿವೆ.

error: Content is protected !!
Scroll to Top