ಸೆ. 22 : ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುಷ್ಠಿಕಾಣಿಕೆ

ಕಾರ್ಕಳ : ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ವೀರಭದ್ರ ದೇವರ ಗರ್ಭಗುಡಿಯ ಪುನ:ನಿರ್ಮಾಣದ ಪ್ರಯುಕ್ತ ಸೆ. 22 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮಸ್ಥರಿಂದ ಮುಷ್ಠಿಕಾಣಿಕೆ ನಡೆಯಲಿದೆ. ವೇ. ಮೂ. ಷಡಂಗ ಬಿ. ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಜೀರ್ಣಾವಸ್ಥೆಯಲ್ಲಿರುವ ಗುಡಿಗಳ ಪುನ:ನಿರ್ಮಾಣಕ್ಕೆ ಪೂರಕವಾಗಿ ಸ್ವರ್ಣರೂಢ ಪ್ರಶ್ನೆಯಲ್ಲಿ ತೋರಿಬಂದ ಪ್ರಕಾರ ಪ್ರಾಯಶ್ಚಿತ್ತ ವಿಧಿ ವಿಧಾನಗಳು ದೇವಸ್ಥಾನದಲ್ಲಿ ನಡೆಯುತಿದ್ದು, ಸೆ. 17 ರಂದು ಶಿಲಾ ಮೂಹೂರ್ತ ಹಾಗೂ ದಾರು ಶಿಲ್ಪಾ ಮೂಹೂರ್ತ, ಸೆ. 21 ರಂದು ಸಂಜೆ 5.30ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, ಸೆ. 22 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಏಕಾಹ ಭಜನೆ, ಬೆಳಿಗೆ 11 ಗಂಟೆಗೆ ಗ್ರಾಮಸ್ಥರಿಂದ ಮುಷ್ಠಿ ಕಾಣಿಕೆ ಸಮರ್ಪಣೆ, ಸಂಜೆ 5 ರಿಂದ ಅಘೋರ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ಬಾಧಾಕಷಣ, ಅಘೋರ ಬಲಿ, ವಾಸ್ತು ರಕ್ಷಾ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಸೆ. 23 ರಂದು ಮಹಾಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ, ಜಿರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top