ಚೈತ್ರಾ ಕುಂದಾಪುರ ಜೊತೆಯಲ್ಲಿ ಕಾರ್ಕಳದ ಇಬ್ಬರ ಬಂಧನ : ಕಣಜಾರಿನಲ್ಲಿ ಗೆಳೆಯನಿಗೆ ಮನೆ ನಿರ್ಮಿಸುತ್ತಿದ ಚೈತ್ರಾ

ಉಪ್ಪೂರಿನಲ್ಲಿ ಶ್ರೀಕಾಂತ್ ನಾಯಕ್ ಜೊತೆ ಜಂಟಿ ಖಾತೆ

ಕಣಜಾರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ ಆರೋಪದಡಿಯಲ್ಲಿ  ಚೈತ್ರಾ ಕುಂದಾಪುರ ಸೆ. 12 ರಂದು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಕಾರ್ಕಳ ಇಬ್ಬರ ಬಂಧನ
ಚೈತ್ರಾ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ, ಆರ್. ಎಸ್. ಧನರಾಜ್, ರಮೇಶ್, ಶ್ರೀಕಾಂತ್ ನನ್ನೂ ಸಹ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಪ್ರಜ್ವಲ್ ಶೆಟ್ಟಿ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದವನಾಗಿದ್ದು, ಪೆರ್ಡೂರಿನಲ್ಲಿ ವಾಸವಿದ್ದನು. ಶ್ರೀಕಾಂತ್ ನಾಯಕ್ ಪೆಲತ್ತೂರಿನವರಾಗಿದ್ದಾನೆ. ಇವರೀರ್ವರೂ ಚೈತ್ರಾ ಜೊತೆಗೆ ಆಕೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಕಣಜಾರಿನಲ್ಲಿ ಮನೆ ನಿರ್ಮಾಣ
ಚೈತ್ರಾ ಕಣಜಾರು ಪ್ರದೇಶದಲ್ಲಿ ಜಾಗ ಖರೀದಿ ಮಾಡಿ ಶ್ರೀಕಾಂತ್‌ ನಾಯಕ್ ಹೆಸರಿನಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಇವರ ಬಂಧನದ ಬಳಿಕ ಮನೆಯ ಕಾಮಗಾರಿಯೂ ನಿಂತಿದೆ‌ ಎನ್ನಲಾಗುತ್ತಿದೆ.

ಜಂಟಿ ಖಾತೆ
ಚೈತ್ರಾ ಮತ್ತು ಶ್ರೀಕಾಂತ್ ನಾಯಕ್  ಹೆಸರಿನಲ್ಲಿ ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯಲ್ಲಿ ಜಂಟಿ ಖಾತೆಯಿದ್ದು, ಇದರಲ್ಲಿ ಶ್ರೀಕಾಂತ್ ಹೆಸರಿನಲ್ಲಿ 1. ಕೋಟಿ 8 ಲಕ್ಷ ರೂ. ಎಫ್ ಡಿ , ಚೈತ್ರಾ ಹೆಸರಿನಲ್ಲಿ ಚಿನ್ನ ಮತ್ತು ನಗದು ಇದೆ ಎಂದು ಸಿಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ.error: Content is protected !!
Scroll to Top