ಕ್ರಿಕೆಟ್ ಪಂದ್ಯಾಟ : ಎಂಟು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಎಂಟು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿನೀತ್ ಪೂಜಾರಿ (6ನೇ ತರಗತಿ), ಅರ್ಜುನ್, ತನ್ಮಯ್ (7ನೇ ತರಗತಿ), ಪಾರ್ಥಿವ್, ಗಗನ್ (8ನೇ ತರಗತಿ), ಅಶರ್, ರೀವನ್, ಸ್ವಸ್ತಿಕ್ (10ನೇ ತರಗತಿ) ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣ ಪ್ರಸಾದ್ ಹಾಗೂ ಪ್ರಕಾಶ್ ನಾಯ್ಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
ದಸರಾ ಕ್ರೀಡಾಕೂಟದಲ್ಲಿ ರಚನಾ ಪದ್ಮಶಾಲಿ ವಿಭಾಗ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ತಾಲೂಕು ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕುಸ್ತಿ ಸ್ಪರ್ಧೆಯಲ್ಲಿ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ರಚನಾ ಪದ್ಮಶಾಲಿ (ದ್ವಿತೀಯ ವಾಣಿಜ್ಯ ವಿಬಾಗ) ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೈಸೂರು ವಿಬಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಸುದೀಕ್ಷಾ ಕಾಮತ್ (ಪ್ರಥಮ ವಿಜ್ಞಾನ ವಿಭಾಗ) ದ್ವಿತೀಯ ಸ್ಥಾನ, ಅಂಕಿತ ಶೆಟ್ಟಿ (ದ್ವಿತೀಯ ವಾಣಿಜ್ಯ ವಿಭಾಗ) ದ್ವಿತೀಯ, ಡೇನಿಕಾ ತೃತೀಯ, ದಿಶಾ ಡಿ’ಮೆಲ್ಲೋ ದ್ವಿತೀಯ, ನೇಹಾ (10ನೇ ತರಗತಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.