ಮಂಗಳೂರು ಕುಕ್ಕರ್‌ ಸ್ಫೋಟ : ಇನ್ನೋರ್ವ ಉಗ್ರ ಬಂಧನ

ತೀರ್ಥಹಳ್ಳಿಯ ಶಂಕಿತ ಉಗ್ರ ದಿಲ್ಲಿಯಲ್ಲಿ ಸೆರೆ

ಹೊಸದಿಲ್ಲಿ : ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಶಂಕಿತ ಉಗ್ರನನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ. ತೀರ್ಥಹಳ್ಳಿ ಮೂಲದ ಶಂಕಿತ ಉಗ್ರ ಅರಾಫತ್ ಅಲಿ ಎಂಬಾತನನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಅರಾಫತ್ ಅಲಿ 2019ರಲ್ಲಿ ತೀರ್ಥಹಳ್ಳಿ ತೊರೆದು ಬೆಂಗಳೂರಿಗೆ ಹೋಗಿದ್ದ. ಬೆಂಗಳೂರಿನಲ್ಲಿಯೇ ಇಂಜಿನಿಯರಿಂಗ್ ಸೇರಿಕೊಂಡಿದ್ದ ಆತನ ಮೇಲೆ 2020ರ ನವಂಬರ್ 27ರಂದು ಮಂಗಳೂರಿನಲ್ಲಿ ಪ್ರಚೋದನಾತ್ಮಕ ಗೋಡೆ ಬರಹ ಬರೆದ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದ ಆರೋಪ ಇತ್ತು.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ನೇರ ಸಂಪರ್ಕ ಹೊಂದಿದ್ದ ಆರಾಫತ್, ಮೊಹಮದ್ ಶಾರೀಖ್ ಹಾಗೂ ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಗೋಡೆ ಬರಹಕ್ಕೆ ಪ್ರಚೋದನೆ ನೀಡಿದ್ದ. ಈತ ಮೂಲತಃ ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿಯಾಗಿದ್ದಾನೆ.
ದುಬೈನ ಅತ್ತರು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ಬಳಿಕ ಈತ ನಾಪತ್ತೆಯಾಗಿದ್ದ. ಕಳೆದ 2020ರಿಂದಲೂ ತಲೆಮರೆಸಿಕೊಂಡಿದ್ದ ಅರಾಫತ್ ಇದೀಗ ಕೀನ್ಯಾದ ನೈರೋಬಿಯಿಂದ ದಿಲ್ಲಿಗೆ ಬಂದ ವೇಳೆ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಐಸಿಸ್ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ ಹಾಗೂ ಹಣದ ಸಹಾಯ ನೀಡುತ್ತಿದ್ದ ಆರೋಪದ ಮೇಲೆ ಆರಾಫತ್ ಆಲಿಯನ್ನು ವಶಕ್ಕೆ ಪಡೆಯಲಾಗಿದೆ.













































































































































































error: Content is protected !!
Scroll to Top