14 ಟಿವಿ ಆ್ಯಂಕರ್‌ಗಳಿಗೆ I.N.D.I.A. ಮೈತ್ರಿಕೂಟ ಬಹಿಷ್ಕಾರ

ಅಭಿವ್ಯಕ್ತಿ ಸ್ವಾತಂತ್ರ್ಯದ ಉಗ್ರ ಪ್ರತಿಪಾದಕರ ಪಲಾಯನವಾದ ಎಂಬ ಟೀಕೆ

ಮುಂಬಯಿ: ವಿರೋಧ ಪಕ್ಷದ ಮೈತ್ರಿಕೂಟ ‘ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್’ (I.N.D.I.A.) ಅರ್ನಾಬ್‌ ಗೋಸ್ವಾಮಿ ಸೇರಿದಂತೆ 14 ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸುವು ನಿರ್ಧಾರ ಕೈಗೊಂಡು ತೀವ್ರ ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಗಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದಲ್ಲಿ ಬುಧವಾರ ನಡೆದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ I.N.D.I.A. ಮೈತ್ರಿಕೂಟ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮಾಧ್ಯಮದ ಒಂದು ವರ್ಗ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷಗಳು ಹಲವು ಬಾರಿ ಆರೋಪಿಸಿವೆ. ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ಭೇಟಿಗೆ ಮಾಧ್ಯಮಗಳು ಅಗತ್ಯ ಪ್ರಸಾರವನ್ನು ನೀಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೈತ್ರಿಕೂಟದ ಸಮನ್ವಯ ಸಮಿತಿಯ ಮೊದಲ ಸಭೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆಯಿತು. ಶರದ್ ಪವಾರ್ ಹೊರತುಪಡಿಸಿ, ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್, ಡಿಎಂಕೆಯ ಟಿ.ಆರ್ ಬಾಲು, ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಜನತಾ ದಳದ (ಯುನೈಟೆಡ್) ಸಂಜಯ್ ಝಾ, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಶಿವಸೇನೆಯ (ಯುಬಿಟಿ) ಸಂಜಯ್ ರಾವತ್, ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.
I.N.D.I.A. ಬಹಿಷ್ಕರಿಸಿದ ಆಂಕರ್‌ಗಳು: ಅದಿತಿ ತ್ಯಾಗಿ,ಅಮನ್ ಚೋಪ್ರಾ, ಅಮಿಶ್ ದೇವಗನ್, ಆನಂದ ನರಸಿಂಹನ್, ಅರ್ನಾಬ್ ಗೋಸ್ವಾಮಿ, ಅಶೋಕ್ ಶ್ರೀವಾಸ್ತವ, ಚಿತ್ರಾ ತ್ರಿಪಾಠಿ, ಗೌರವ್ ಸಾವಂತ್, ನಾವಿಕ ಕುಮಾರ್, ಪ್ರಾಚಿ ಪರಾಶರ, ರೂಬಿಕಾ ಲಿಯಾಕತ್, ಶಿವ ಆರೂರ್, ಸುಧೀರ್ ಚೌಧರಿ, ಸುಶಾಂತ್ ಸಿನ್ಹಾ.
ನೇರ ಪ್ರಶ್ನೆಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದೆ ಆ್ಯಂಕರ್‌ಗಳನ್ನು ಬಹಿಷ್ಕರಿಸುವ ಪಲಾಯನ ವಾದವನ್ನು I.N.D.I.A. ನಾಯಕರು ಅನುಸರಿಸಿದ್ದಾರೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಒಕ್ಕೂಡದಲ್ಲಿರುವ ನಾಯಕರೆಲ್ಲ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಉಗ್ರ ಪ್ರತಿಪಾದಕರಾಗಿದ್ದವರು. ಆದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಅವರ ಭಟ್ಟಂಗಿತನಕ್ಕೆ ಮಾತ್ರ ಸೀಮಿತ. ತಮ್ಮನ್ನು ಟೀಕಿಸುವವರನ್ನು ಮತ್ತು ಪ್ರಶ್ನಿಸುವವರನ್ನು ಅವರು ಅಭಿವ್ಯಕ್ತಿ ಸ್ವಾತಂತ್ರ್ಯದದಿಂದಲೇ ಹೊರಗಿಡುತ್ತಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

error: Content is protected !!
Scroll to Top