ಮಲ್ಪೆ: ಮನೆ ನಿರ್ಮಾಣಕ್ಕೆಂದು ತಂದ ಗ್ರಾನೈಟ್ ಅನ್ನು ಲಾರಿಯಿಂದ ಅನ್‌ಲೋಡ್ ಮಾಡುತ್ತಿರುವಾಗ ಅದು ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರು ಸಾವಿಗೀಡಾದ ದಾರುಣ ಘಟನೆ ಮಲ್ಪೆ ಸಮೀಪ ತೊಟ್ಟಂನಲ್ಲಿ ಗುರುವಾರ ಸಂಭವಿಸಿದೆ.
ಮೃತ ಕಾರ್ಮಿಕರನ್ನು ಒಡಿಶಾ ಮೂಲದ ಬಾಬುಲ್ಲ (38) ಮತ್ತು ಭಾಸ್ಕರ (40) ಎಂದು ಗುರುತಿಸಲಾಗಿದೆ. ತೊಟ್ಟಂನ ಕರಾವಳಿ ಯುವಕ ಮಂಡಳಿಯ ಬಳಿಕ ಮನೆಯೊಂದಕ್ಕೆ ಗ್ರಾನೈಟ್ ತರಲಾಗಿತ್ತು. ಇದನ್ನು ಇಳಿಸುವ ವೇಳೆ ಆಯತಪ್ಪಿ ಗ್ರಾನೈಟ್ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅನ್‌ಲೋಡ್ ಮಾಡುವಾಗ ಮೈ ಮೇಲೆ ಬಿದ್ದ ಗ್ರಾನೈಟ್ : ಇಬ್ಬರು ಕಾರ್ಮಿಕರು ಸಾವು
