ಮನೆಯ ನೆಲಮಾಳಿಗೆಯಿಂದ ಆಭರಣ ಕಳವು

ಪ್ರಕರಣ ಬೆಳಕಿಗೆ ಬಂದದ್ದು ಮೂರು ತಿಂಗಳ ಬಳಿಕ

ಬೆಳ್ತಂಗಡಿ: ಮನೆಯ ನೆಲ ಮಾಳಿಗೆಯಲ್ಲಿಟ್ಟಿದ್ದ ಚಿನ್ನವನ್ನು ಕಳವು ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ಬೆಳಕಿಗೆ ಬಂದಿದೆ. ಕಳವು ಸಂಭವಿಸಿ ಮೂರು ತಿಂಗಳೇ ಆಗಿದ್ದರೂ ಮನೆಮಂದಿಯ ಗಮನಕ್ಕೆ ಬಂದದ್ದು ಬುಧವಾರ.
ಮುಂಡಾಜೆ ಗ್ರಾಮದ ಕಡಂಬಳ್ಳಿಯ ಪ್ರಮೋದ್‌ ವಿ. ಭಿಡೆ ಎಂಬವರ ಮನೆಯಲ್ಲಿ ಈ ಕಳ್ಳತನ ಘಟನೆ ನಡೆದಿದೆ.
ಕಳೆದ ಜು. 5ರಂದು ಮನೆಯ ಗಾರೆ ಹಾಗೂ ಪೈಂಟಿಂಗ್‌ ಕೆಲಸಮಾಡಲಾಗಿತ್ತು. ಹೀಗಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು, ಭಿಡೆಯವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಇರಿಸಿದ್ದರು. ಆದರೆ ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಕೋಣೆಗೆ ಬೀಗ ಹಾಕಿರಲಿಲ್ಲ. ಕೆಲಸಕ್ಕೆ ಸುಮಾರು 10ರಿಂದ 13 ಕಾರ್ಮಿಕರು ಬಂದಿದ್ದರು. ಕೆಲಸ ಮುಗಿದದ್ದು ಜು. 19ರಂದು.
ಸೆ.12ರಂದು ಬೆಳಗ್ಗೆ ಕಾರ್ಯಕ್ರಮಕ್ಕೆ ತೆರಳಲು ಆಭರಣ ಧರಿಸಲೆಂದು ನೆಲಮಾಳಿಗೆಯ ಕೋಣೆಗೆ ಹೋಗಿ ನೋಡಿದಾಗ ಅಲ್ಲಿ ಇಡಲಾಗಿದ್ದ ಒಟ್ಟು 122 ಗ್ರಾಂ ಚಿನ್ನಾಭರಣ ಇರಲಿಲ್ಲ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂ. ಆಗಿದೆ. ಚಿನ್ನಾಭರಣವಿರಿಸಿ ಮೂರು ತಿಂಗಳವರೆಗೂ ಮನೆಮಂದಿ ಪರಿಶೀಲಿಸದೆ ಇರುವುದರಿಂದ ಯಾವಾಗ ಕಳವಾಗಿರಬಹುದು ಎಂಬುದು ಕೂಡ ಗೊತ್ತಿಲ್ಲ.
ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕೆಲಸ ಮಾಡಿರುವ ಕಾರ್ಮಿಕರ ಪೈಕಿ ಹಲವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಮಂದಿ ಊರಲ್ಲಿಲಿಲ್ಲದಿರುವುದರಿಂದ ಅವರನ್ನು ಕೇಂದ್ರೀಕರಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.









































































































































































error: Content is protected !!
Scroll to Top