ಮೂಡುಬಿದಿರೆ : ಬೆಳುವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್‌ಗಳನ್ನು ಕಳವು ಮಾಡಿದ ಓರ್ವನನ್ನು ಬಂಧಿಸಿರುವ ಮೂಡುಬಿದಿರೆ ಪೊಲೀಸರು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯಿಂದ ಸುಮಾರು 2.50 ಲಕ್ಷ ರೂ. ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪನ್ನು ಸ್ವಾಧೀನಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೇಶ್ ಪಿ.ಜಿ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳುವಾಯಿ : ಸೆಂಟ್ರಿಂಗ್ ಶೀಟ್ ಕಳ್ಳನ ಬಂಧನ
