ಮೂಡುಬಿದಿರೆ : ನೀತಿ ಆಯೋಹ ಹಾಗೂ ಎಟಿಎಲ್ (ATL) ಇನೋವೇಟಿವ್ ಮಿಷನ್ ಸಹಯೋಗದಲ್ಲಿ ನಡೆದ ಎಟಿಎಲ್ ಮ್ಯಾರಥಾನ್ – 2023 (MARATHON-2023) ಸ್ಪರ್ಧೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮೌಲ್ಯ ವೈ. ಆರ್. ಜೈನ್ ಹಾಗೂ ಅಕ್ಷರಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೌಲ್ಯ ವೈ. ಆರ್. ಜೈನ್ ಯುವರಾಜ್ ಜೈನ್ ಹಾಗೂ ರಶ್ಮಿತಾ ಜೈನ್ ದಂಪತಿ ಪುತ್ರಿ. ಅಕ್ಷರ ಸೋಮೇಶ್ ಹಾಗೂ ಸೌಮ್ಯ ದಂಪತಿ ಪುತ್ರಿ.
ಬಿಡುವಿಲ್ಲದ ಹೆದ್ದಾರಿಯಿಂದ ಶಕ್ತಿ ಉತ್ಪಾದನೆ (Energy generation by busy highway )ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇವರು ಸಿದ್ಧಗೊಳಿಸಿದ ವಿಜ್ಞಾನ ಮಾದರಿ ರಾಷ್ರಮಟ್ಟಕ್ಕೆ ಆಯ್ಕೆಗೊಂಡಿದೆ. ವಿಜ್ಞಾನ ಶಿಕ್ಷಕ ನಿರಂಜನ್ ಪೂಜಾರಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.
ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.