ಕಾರ್ಕಳ : ಆನ್‌ಲೈನ್‌ನಲ್ಲಿ ಹಣ ದ್ವಿಗುಣವಾಗುವ ಆಮಿಷಕ್ಕೆ ಬಲಿಬಿದ್ದು ಕಾರ್ಕಳದ ಮಹಿಳೆಯೋರ್ವರು 6. 50 ಲ. ರೂ. ಕಳೆದುಕೊಂಡಿರುತ್ತಾರೆ. ಸೆ. 4ರಂದು ಅವರ ವಾಟ್ಸಪ್‌ಗೆ ಆನ್‌ಲೈನ್ ಉದ್ಯೋಗದ ಸಂದೇಶ ಬಂದಿದ್ದು, ಅದರಂತೆ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿದ್ದರು. ಲಿಂಕ್ ಕಳುಹಿಸಿದವರು ಟಾಸ್ಕ್ ಕ್ರಿಯೇಟ್ ಮಾಡಿ ಮಹಿಳೆಗೆ ಹಣ ಪಾವತಿಸಲು ತಿಳಿಸಿರುತ್ತಾರೆ. ಈ ಹಣವನ್ನು ಲಾಭಾಂಶದೊಂದಿಗೆ ಮರುಪಾವತಿ ಮಾಡುವುದಾಗಿ ನಂಬಿಸಿದ್ದಾರೆ. ಜಗನ್ನಾಥ ಮಾಧವನ್ ಎಂಬ ಐಡಿ ಖಾತೆಗೆ ಹಂತ ಹಂತವಾಗಿ ಸೆ. 5 ರಿಂದ ಸೆ. 8ರ ವರೆಗೆ ಒಟ್ಟು 6. 50 ಲ. ರೂ. ಸುಜಿತ್ರಾ ಪಾವತಿಸಿದ್ದಾರೆ. ಅನಂತರ ಲಿಂಕ್ ಕಳುಹಿಸಿದವರು ಹಣದೊಂದಿಗೆ ಮಾಯವಾಗಿದ್ದಾರೆ. ಮಹಿಳೆ ಎಷ್ಟೇ ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಹಿರ್ಗಾನದ ಮಹಿಳೆಗೆ ಆನ್‌ಲೈನ್‌ನಲ್ಲಿ 6.50 ಲ.ರೂ. ವಂಚನೆ
