ಶ್ರೀ ಮಾರಿಯಮ್ಮ ದೇವರ ಸೇವಾ ಟ್ರಸ್ಟ್

ಅಧ್ಯಕ್ಷರಾಗಿ ಸುಧಾಕರ ಸಾಲಿಯಾನ್ – ಕಾರ್ಯದರ್ಶಿಯಾಗಿ ಜಯ ಎಂ. ರಾವ್

ಕಾರ್ಕಳ : ಶ್ರೀ ಮಾರಿಯಮ್ಮ ದೇವರ ಸೇವಾ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಸುಧಾಕರ ಸಾಲಿಯಾನ್, ಕಾರ್ಯದರ್ಶಿಯಾಗಿ ಜಯ ಎಂ. ರಾವ್ ಆಯ್ಕೆಯಾಗಿದ್ದಾರೆ. ಸೆ. 14 ರಂದು ಮಾರಿಯಮ್ಮ ದೇವಸ್ಥಾನದಲ್ಲಿ ಉಮೇಶ್ ಶೆಟ್ಟಿ ಬಂಡೀಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಟ್ರಸ್ಟ್‌ನ ವಾರ್ಷಿಕ ಸಭೆಯಲ್ಲಿ 2023-2025 ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ನವೀನ್ ದೇವಾಡಿಗ, ಭಾಸ್ಕರ್ ಕುಲಾಲ್, ಉಮೇಶ್ ಶೆಟ್ಟಿ ಬಂಡೀಮಠ, ಉಪಾಧ್ಯಕ್ಷ – ದಯಾನಂದ, ಜೊತೆ ಕಾರ್ಯದರ್ಶಿ – ರಮೇಶ್ ದೇವಾಡಿಗ, ಕೋಶಾಧಿಕಾರಿ – ಪ್ರದೀಪ್ ಕೆ. ಜೋಡುರಸ್ತೆ, ಲೆಕ್ಕ ಪರಿಶೋಧಕ – ಪ್ರವೀಣ್ ಕೆ. ಗಾಂಧಿ ಮೈದಾನ, ಗೌರವ ಸಲಹೆಗಾರರಾಗಿ ಪ್ರವೀಣ್ ಮಾಬಿಯಾನ್, ಜಯಂತಿ ಶೆಟ್ಟಿ, ದಯಾನಂದ ಮೊಯಿಲಿ, ಅಂಬಾಪ್ರಸಾದ್, ಸಂತೋಷ್ ನಾಯಕ್, ಜಯರಾಮ್ ಕೆ., ಕೃಷ್ಣ ಮಡಿವಾಳ, ರಾಘು ಮಡಿವಾಳ, ಸುಂದರ ಕೆ., ಪ್ರವೀಣ್ ಶೆಟ್ಟಿ ಆನೆಕೆರೆ ಹಾಗೂ ಸತೀಶ್ ಗುಜರಾತ್‌, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಕರ ಪೂಜಾರಿ, ಜಯಂತ ಸಫಲಿಗ, ಬೇಬಿ ಅಜೆಕಾರು, ದಿನೇಶ್ ಕೆ., ನಾರಾಯಣ ಶೆಟ್ಟಿ, ಪ್ರಭಾಕರ ಪೂಜಾರಿ, ಹರೀಶ್ ದೇವಾಡಿಗ, ಶಿವಾನಂದ ಪೂಜಾರಿ, ಸುಂದರ ಕೋಟ್ಯಾನ್, ವನಿತಾ ಅನೂಪ್ ಶೆಟ್ಟಿ, ವೀಣಾ ರಾಜೇಶ್ ಭಂಡಾರಿ, ಮಲ್ಲಿಕ ಶೆಟ್ಟಿ, ಸುಜಾತ ಶೆಟ್ಟಿ, ಹರಿಣಿ ಶೆಟ್ಟಿ, ಜಯಲಕ್ಷ್ಮಿ ಭಂಡಾರಿ, ಸರೋಜ ವಿ. ಶೆಟ್ಟಿ, ಲಕ್ಷ್ಮಣ್ ಮೊಯಿಲಿ, ದಿನೇಶ್ ದೇವಾಡಿಗ, ನಾಗರಾಜ, ಸುನೀಲ್ ಕೋಟ್ಯಾನ್, ರವಿ ಕುಮಾರ್, ಸವಿತ ದೇವಾಡಿಗ, ರಾಜೇಶ್ವರಿ, ವಿಠಲ ಕುಲಾಲ್, ಸದಾನಂದ ಗುತ್ತಬೈಲು ಹಾಗೂ ವಸಂತ ಆಚಾರ್ಯ ಆಯ್ಕೆಯಾಗಿದ್ದಾರೆ.

error: Content is protected !!
Scroll to Top