ಜ್ಞಾನಸುಧಾ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ವಾಲಿಬಾಲ್ : ಸಾಕ್ಷಿ ಶೆಟ್ಟಿ ವಿಭಾಗೀಯ ಮಟ್ಟಕ್ಕೆ

ಕಾರ್ಕಳ : ಕೋಟ ವಿವೇಕ ಪ.ಪೂ. ಕಾಲೇಜಿನಲ್ಲಿ ಸೆ. 12 ರಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈ ಮೂಲಕ ಮೈಸೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶ ಪಡೆದಿರುತ್ತಾರೆ. ಸಾಕ್ಷಿ ಶೆಟ್ಟಿ ನೀರೆ ಗ್ರಾಮದ ಹರೀಶ್ ಶೆಟ್ಟಿ ಹಾಗೂ ಜಯಲಕ್ಷ್ಮೀ ಶೆಟ್ಟಿ ದಂಪತಿ ಪುತ್ರಿ.

ಯೋಗಾಸನ ಸ್ಪರ್ಧೆ – ಜ್ಞಾನಸುಧಾದ ಅನ್ವಿ ಎಚ್‌. ಅಂಚನ್‌ ಜಿಲ್ಲಾ ಮಟ್ಟಕ್ಕೆ

ಯೋಗಾಸನ ಸ್ಪರ್ಧೆ – ಜ್ಞಾನಸುಧಾದ ಅನ್ವಿ ಎಚ್‌. ಅಂಚನ್‌ ಜಿಲ್ಲಾ ಮಟ್ಟಕ್ಕೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾರ್ಕಳ ತಾಲೂಕು ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಸೆ. 12 ರಂದು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ-ಹೆಬ್ರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅನ್ವಿ ಎಚ್‌. ಅಂಚನ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈ ಮೂಲಕ ಮೈಸೂರು ದಸರಾ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅನ್ವಿ ಎಚ್‌. ಅಂಚನ್‌ ಕಾರ್ಕಳದ ಹರೀಶ್ ಹಾಗೂ ಶೋಭಾ ದಂಪತಿ ಪುತ್ರಿ.

ಕ್ರಿಕೆಟ್ : ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಸಹಯೋಗದಲ್ಲಿ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕರ ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆ ಸೆ. 13 ರಂದು ಕಾರ್ಕಳ ಗಾಂಧಿ ಮೈದಾನ ಕ್ರೀಡಾಂಗಣದಲ್ಲಿ ನಡೆಯಿತು.

ವಯೋಮಾನ 17ರ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮುಖ್‌ರಾಜ್ (10ನೇ ತರಗತಿ), ಶೋಧನ್ ವರ್ಮ (9ನೇ ತರಗತಿ) ಹಾಗೂ ವಯೋಮಾನ 14ರ ವಿಭಾಗದಲ್ಲಿ ಸನತ್‌ ಎನ್‌. ನಾಯಕ್ (8ನೇ ತರಗತಿ), ಪ್ರದ್ಯೋತ್ ಪ್ರಮಲ್ (7ನೇ ತರಗತಿ) ಜಿಲ್ಲಾ ಮಟ್ಟದ ಕ್ರಿಕೆಟ್‌ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರು ಪದ್ಮಗೋಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಸಂಸ್ಥೆಯ ಸಿ.ಇ.ಒ ದಿನೇಶ್. ಎಂ. ಕೊಡವೂರು, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ರಾವ್ ಯು., ಸಹ ಮುಖ್ಯ ಶಿಕ್ಷಕಿ ವಾಣಿ ಕೆ. ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.































































































































































error: Content is protected !!
Scroll to Top