ಕಾರ್ಕಳ : ನೀರೆ ಬೈಲೂರು ಗಾಂಧಿ ಸ್ಮಾರಕ ಭವನದಲ್ಲಿ 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ. 19 ಮತ್ತು ಸೆ. 20 ರಂದು ಜರುಗಲಿದೆ.
ಸೆ. 19 ರಂದು ಬೆಳಿಗ್ಗೆ 9.30 ಗಂಟೆಗೆ ಗುಡ್ಡೆಯಂಗಡಿ ಕೇಶವ ಆಚಾರ್ಯಅವರ ಮನೆಯಿಂದ ಹೊರಟು, ಬೈಲೂರು ಪಳ್ಳಿ ಕ್ರಾಸ್‌ನಿಂದ ವಿಗ್ರಹವನ್ನು ಮೆರವಣಿಗೆಯಿಂದ ಗಾಂಧಿ ಸ್ಮಾರಕ ಭವನಕ್ಕೆ ತರುವುದು. 10 ಗಂಟೆಗೆ ಪ್ರತಿಷ್ಠೆ, ಗಣಹೋಮ, ಮಂಗಳಾರತಿ, ಮಧ್ಯಾಹ್ನ 2 ಗಂಟೆಯಿಂದ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು, ನಂತರ ಹಗ್ಗ ಜಗ್ಗಾಟ, ಸಂಜೆ ಭಜನಾ ಕಾರ್ಯಕ್ರಮ, 6 ಗಂಟೆಗೆ ರಂಗಪೂಜೆ, ರಾತ್ರಿ 8 ಗಂಟೆಗೆ ರಂಗ ತರಂಗ ಕಲಾವಿದರು ಕಾಪು ತಂಡದವರಿಂದ ತುಳು ಹಾಸ್ಯಮಯ ನಾಟಕ ಬುಡೆದಿ ಪ್ರದರ್ಶನಗೊಳ್ಳಲಿದೆ.
ಸೆ. 20 ರಂದು ಬೆಳಗ್ಗೆ 9.30ರಿಂದ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ. ಮಧ್ಯಾಹ್ನ 2 ಗಂಟೆಗೆ ಮಂಗಳೂರು ಸ್ಟಾರ್ ಆರ್ಕೇಸ್ಟ್ರಾ ತಂಡದವರಿಂದ ಸಂಗೀತ ರಸಮಂಜರಿ, ಗಿನ್ನಿಸ್ ದಾಖಲೆಯ ಯೋಗಪಟು ತನುಶ್ರೀ ಪಿತ್ರೋಡಿ ಅವರಿಂದ ನೃತ್ಯ ಕಾರ್ಯಕ್ರಮ, ಮಂಗಳೂರು ಆರ್ಯನ್ಸ್ ಡ್ಯಾನ್ಸ್ ಸ್ಟಡಿಯೋದವರಿಂದ ನೃತ್ಯ ವೈಭವ ನಡೆಯಲಿದೆ.
ಸಂಜೆ 6 ಗಂಟೆಗೆ ವಿಸರ್ಜನಾ ಮಹಾಪೂಜೆ, ಮಂಗಳಾರತಿ ನಂತರ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ವಿನೂತನ ಟ್ಯಾಬ್ಲೊ ನೃತ್ಯ ಕಾರ್ಯಕ್ರಮ ಇರಲಿದೆ ಎಂದು ನೀರೆ ಬೈಲೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.