ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಉತ್ಕೃಷ್ಟ ಗುಣಮಟ್ಟದ ಕೊಕೇನ್ ಸಾಗಿಸಲು ಯತ್ನಿಸಿದ ಆಫ್ರಿಕಾದ ಮಹಿಳೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಆಕೆ 1.02 ಕೆಜಿ ಕೊಕೇನ್ ಕಳ್ಳಸಾಗಣೆ ಮಾಡಲು ಯತ್ನಿಸಿದ್ದಳು. ಮಹಿಳೆಯನ್ನು ಕೀನ್ಯಾದ ಅಜೆಂಗ್ ಓ ಕ್ಯಾರೋಲಿನ್ ಅಗೋಲಾ ಎಂದು ಗುರುತಿಸಲಾಗಿದೆ.
ಆಕೆ ತನ್ನ ಖಾಸಗಿ ಭಾಗಗಳು ಮತ್ತು ಒಳ ಉಡುಪುಗಳಲ್ಲಿ ಕ್ಯಾಪ್ಸೂಲ್‌ಗಳ ರೂಪದಲ್ಲಿದ್ದ ಕೊಕೇನ್ ಬಚ್ಚಿಟ್ಟಿದ್ದಳು. ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದಲ್ಲಿ (ಇಟಿ 690) ಬಂದಿದ್ದಳು. ಅದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಳಿಗ್ಗೆ 11.09ಕ್ಕೆ ತಲುಪಿತ್ತು. ಸಿಐಎಸ್ಎಫ್ ಪೊಲೀಸರಿಗೆ ಈ ಮಹಿಳೆ ನಡೆಯುವಾಗ ಅನುಮಾನ ಬಂದಿದೆ. ಆಕೆಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಪರಿಶೀಲಿಸಿದಾಗ ಒಳ ಉಡುಪುಗಳಲ್ಲಿ ಅನೇಕ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಆಕೆ ಕೆಲವು ಕ್ಯಾಪ್ಸುಲ್‌ಗಳನ್ನು ಇಡಿಯಾಗಿ ನುಂಗಿರುವುದನ್ನು ಒಪ್ಪಿಕೊಂಡಿದ್ದಾಳೆ. ಸುಮಾರು 12 ಕೋಟಿ ರೂ. ಮೌಲ್ಯದ ಕೊಕೇನ್ ಕ್ಯಾಪ್ಸೂಲ್‌ಗಳನ್ನು ಅವಳಿಂದ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ರೂ. ಮೌಲ್ಯದ ಕೊಕೇನ್ ವಶ
