ಬೆಳ್ಮಣ್‌ ಲಯನ್ಸ್‌ ಕ್ಲಬ್‌ – ಶಿಕ್ಷಕ ತರಬೇತಿ ಕಾರ್ಯಗಾರಕ್ಕೆ ಚಾಲನೆ

ಕಾರ್ಕಳ : ಲಯನ್ಸ್‌ ಕ್ಲಬ್‌ ಬೆಳ್ಮಣ್‌ ಮತ್ತು ಲಯನ್ಸ್‌ ಕ್ಲಬ್‌ ಬೆಳ್ಮಣ್‌ ಸೆಂಚುರಿ ಆಶ್ರಯದಲ್ಲಿ ಹದಿಹರೆಯದ ಕೌಶಲ್ಯಗಳ ತರಬೇತಿಯ ಲಯನ್ಸ್‌ ಕ್ವೆಸ್ಟ್‌ ಶಿಕ್ಷಕ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ಸೆ. 12 ರಂದು ಸಂತ ಜೋಸೆಫ್‌ ಚರ್ಚ್‌ ಸಭಾಂಗಣದಲ್ಲಿ ಜರುಗಿತು. ಚರ್ಚ್‌ನ ಧರ್ಮಗುರು ಫೆಡ್ರಿಕ್‌ ಮಸ್ಕೇರೆನಸ್‌ ಕಾರ್ಯಗಾರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಸುಮಾರು 35 ಮಂದಿ ಶಿಕ್ಷಕರು ಭಾಗಿಯಾಗಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಾಗಾರವನ್ನು ತರಬೇತುದಾರೆ ಕವಿತಾ ಶಾಸ್ತ್ರೀ ನಡೆಸಿಕೊಡಲಿದ್ದಾರೆ.
ಲಯನ್ಸ್‌ ಜಿಲ್ಲಾ ಮುಖ್ಯ ಸಂಯೋಜಕ ಡಾ. ಭಾರ್ಗವಿ ಐತಾಳ್‌, ಸಂಯೋಜಕಿ ಸರಸ್ವತಿ ಪುತ್ರನ್, ಮಾಜಿ ಜಿಲ್ಲಾ ಗವರ್ನರ್‌ ಎನ್.‌ ಎಂ. ಹೆಗಡೆ, ಬೆಳ್ಮಣ್‌ ಲಯನ್ಸ್‌ ಕ್ಲಬ್‌ ಅಧ್ಯಕ್ಷ ವಿಶ್ವನಾಥ ಪಾಟ್ಕರ್‌, ಸೆಂಚುರಿಯ ಅಧ್ಯಕ್ಷ ಸುಜನ್‌ ಕ್ಯಾಸ್ತಲಿನೋ ಮತ್ತು ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿಣ್ಮಯಿ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.error: Content is protected !!
Scroll to Top