2.5 ಕ್ವಿಂಟಾಲ್‌ ಗೋ ಮಾಂಸ ವಶ : ಮೂವರ ಬಂಧನ

ವಾಹನ ತಡೆದು ಪೊಲೀಸರಿಗೊಪ್ಪಿಸಿದ ಬಜರಂಗ ದಳ ಕಾರ್ಯಕರ್ತರು

ಮಂಗಳೂರು : ದನದ ಮಾಂಸ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಬಜರಂಗ ದಳದ ಕಾರ್ಯಕರ್ತರು ಭಾನುವಾರ ಮುಂಜಾನೆ ತಡೆದು ನಿಲ್ಲಿಸಿ, ವಾಹನದಲ್ಲಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ಕಳವಾರು ಗ್ರಾಮದ ದಾವೂದ್‌, ಜೋಕಟ್ಟೆಯ ಬದ್ರುದ್ದೀನ್‌ ಮತ್ತು ಯಾಸೀನ್‌ ಎಂದು ಗುರುತಿಸಲಾಗಿದೆ.
ವಾಹನದಲ್ಲಿ ಸುಮಾರು 2.5 ಕ್ವಿಂಟಾಲ್‌ ಗೋ ಮಾಂಸವನ್ನು ಜೋಕಟ್ಟೆಯಿಂದ ನಗರದ ಬೀಫ್‌ ಸ್ಟಾಲ್‌ಗ‌ಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಗೋ ಹತ್ಯಾ ನಿಷೇಧ ಕಾಯ್ದೆಯಡಿ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













































































































































































error: Content is protected !!
Scroll to Top