ಸನಾತನ ಧರ್ಮ ಕಿತ್ತೊಗೆಯುವ ಪ್ರಯತ್ನದ ವಿರುದ್ಧ ಹೋರಾಟಕ್ಕೆ ಸಂಕಲ್ಪ
ಉಡುಪಿ : ಸನಾತನ ಧರ್ಮೀಯರೇ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿ ಸನಾತನ ಧರ್ಮವನ್ನೇ ಕಿತ್ತೊಗೆಯಬೇಕು ಎನ್ನುವ ಮೂಲಕ ದೇಶವನ್ನು ಛಿದ್ರ ಮಾಡಲು ಹೊರಟಿರುವವರನ್ನು ಬೆಂಬಲಿಸುವ ಯಾವುದೇ ರಾಜಕೀಯ ಅಥವಾ ದೇಶದ್ರೋಹಿ ಶಕ್ತಿಗಳಿಗೆ ಸಂದರ್ಭ ಬಂದಾಗ ಅವಶ್ಯವಾಗಿ ಪಾಠ ಕಲಿಸಬೇಕು. ಅದಕ್ಕಾಗಿ ಸಮಸ್ತ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ತಮ್ಮ 36ನೇ ಚಾತುರ್ಮಾಸ್ಯದ ಅಂಗವಾಗಿ ಚಾತುರ್ಮಾಸ್ಯ ವ್ರತ ಸಮಿತಿ ಮತ್ತು ಮೈಸೂರು ಜಿಲ್ಲಾ ವಿಶ್ವ ಹಿಂದು ಪರಿಷತ್ ಸಂಯೋಜನೆಯಲ್ಲಿ ಭಾನುವಾರ ನಡೆದ ಸಂತ ಸಮಾವೇಶ ಮತ್ತು ಬೃಹತ್ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು.
30ಕ್ಕೂ ಅಧಿಕ ಮಠಾಧೀಶರು ಸಾಧು ಸಂತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಹಿಂದೂ ಧರ್ಮ ಎದುರಿಸುತ್ತಿರುವ ಗೋಹತ್ಯೆ, ಲವ್ ಜಿಹಾದ್, ಕೌ ಜಿಹಾದ್, ಜಾತ್ರಾ ಜಿಹಾದ್, ಮತಾಂತರ, ಸಾಮಾಜಿಕ ಜಾಲತಾಣಗಳಿಂದಾಗಿ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿ ಮೊದಲಾದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.