ಮರಾಠ ಪರಿಷತ್‌ನ ರಾಜ್ಯಾಧ್ಯಕ್ಷ ವಿ.ಎ.ರಾಣೋಜಿ ರಾವ್ ಸಾಠೆಯವರಿಗೆ ಶ್ರದ್ಧಾಂಜಲಿ ಸಭೆ
ಕಾರ್ಕಳ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಜ್ಯಾಧ್ಯಕ್ಷ, ಗವರ್ನಿಂಗ್ ಕೌನ್ಸಿಲ್ ಚೇರ್ಮೆನ್ ಆಗಿ ಸಮಾಜಕ್ಕಾಗಿ ದುಡಿದ ಹಿರಿಯರಾದ ವಿ.ಎ.ರಾಣೋಜಿ ರಾವ್ ಸಾಠೆಯವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಂತಾಪ ಸಭೆ ಕಾರ್ಕಳದ ಕಾಳಿಕಾಂಬಾ ಶ್ರೀ ದುರ್ಗಾಮಾತಾ ನಿವಾಸದಲ್ಲಿ ಜರಗಿತು.
ಉಡುಪಿ ಜಿಲ್ಲೆಯ ವತಿಯಿಂದ ಆಯೋಜಿಸಲಾದ ಸಂತಾಪ ಸಭೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿ, ಮರಾಠ ಸಮಾಜದ ಏಳಿಗೆಗೆ ಅವಿರತ ಶ್ರಮ, ಸಮಾಜದ ಬಗ್ಗೆ ಕಾಳಜಿ, ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಮರಾಠ ನಿಗಮ ಸ್ಥಾಪನೆಗೆ ಇದ್ದ ಕಾಳಜಿ, ಹೋರಾಟ ಅಪಾರವಾದದ್ದು. ಮರಾಠ ಪರಿಷತ್‌ನಲ್ಲಿ ಮಾಸಿಕ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಕಾರ್ಕಳ ತಾಲೂಕು ಘಟಕದ ಕಾರ್ಯದರ್ಶಿ ಹರೀಶ್ ರಾವ್ ಅಸ್ವಾಲ್, ಕೋಶಾಧಿಕಾರಿ ಸತೀಶ್ ರಾವ್ ಪವಾರ್, ಸಂತೋಷ್ ರಾವ್ ಲಾಡ್, ಹರಿಶ್ಚಂದ್ರ ರಾವ್ ಮೋರೆ, ದಿನೇಶ್ ರಾವ್, ನಾಗೇಶ್ ರಾವ್, ಸುಧೀರ್ ರಾವ್, ತಾರಾನಾಥ್ ಲಾಡ್, ರೋಹಿತ್ ರಾವ್, ರಾಘವೇಂದ್ರ ರಾವ್, ರಾಜೇಶ್ ರಾವ್ ಹಾಗೂ ಸಮಾಜದ ಬಂಧುಗಳುವರು ಉಪಸ್ಥಿತರಿದ್ದರು.