ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಹಾಗೂ ಕುಂಜಿಬೆಟ್ಟು ಟಿ.ಎಂ.ಪೈ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ-ಬಾಲಕಿಯರ ಈಜು ಸ್ಪರ್ದೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಭೂಮಿ (8ನೇ ತರಗತಿ) 14 ರ ವಯೋಮಿತಿಯ ಬಾಲಕಿಯರ 50 ಮೀ. ಫ್ರೀ ಸ್ಟೈಲ್ ಮತ್ತು 100 ಮೀ. ಫ್ರೀ ಸ್ಟೈಲ್ ಹಾಗೂ 50 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್‌ನೊಂದಿಗೆ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾರ್ಥಿನಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ ಶೆಟ್ಟಿ, ಸಿಇಓ ದಿನೇಶ್ ಕೊಡವೂರು, ಮುಖ್ಯ ಶಿಕ್ಷಕಿ ಉಷಾ ರಾವ್ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ಈಜು ಸ್ಪರ್ಧೆ : ಜ್ಞಾನಸುಧಾದ ಭೂಮಿ ರಾಜ್ಯಮಟ್ಟಕ್ಕೆ
