ಇರ್ವತ್ತೂರು ಕೊರಂಜೆ ಶಾಲೆಗೆ ಮರ ಬಿದ್ದು ಹಾನಿ

ಕಾರ್ಕಳ : ಇರ್ವತ್ತೂರು ಕೊರಂಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ಸೆ. 10 ರಂದು ಬೀಸಿದ ಗಾಳಿ ಮಳೆಗೆ ಮರ ಬಿದ್ದು ಹಾನಿಯಾಗಿರುತ್ತದೆ. ಆದಿತ್ಯವಾರ ಈ ಘಟನೆ ನಡೆದಿದ್ದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು ಇರದೇ ಇದ್ದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿತ್ತು. ಬೆಳ್ಮಣ್‌ನಲ್ಲಿ ರಾತ್ರಿ ಮರ ಬಿದ್ದು ಬೈಕ್‌ ಸವಾರ ಮೃತಪಟ್ಟ ಘಟನೆ ಹಾಗೂ ನಿಟ್ಟೆಯಲ್ಲಿ ಓರ್ವ ವ್ಯಕ್ತಿ ಮತ್ತು ಹೊಸ್ಮಾರಿನಲ್ಲಿ ಓರ್ವ ಮಹಿಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಸಂಭವಿಸಿತ್ತು. ಆಗಸ್ಟ್‌ ತಿಂಗಳು ಪೂರ್ತಿ ಬಿಸಿಲು ಆವರಿಸಿದ್ದು, ಬೇಸಿಗೆಯಂತಿತ್ತು. ಇದೀಗ ಮತ್ತೆ ಮಳೆಯ ಸಿಂಚನ ಆರಂಭವಾಗಿದೆ. ಮಳೆಯಿಲ್ಲದೆ ರೈತರು ಚಿಂತಿಸುತ್ತಿದ್ದರು, ಮಳೆಯ ಆರಂಭ ಕೃಷಿ ಚಟುವಟಿಕೆಗಳಿಗೆ ಮತ್ತೆ ಹೊಸ ಹುರುಪು ನೀಡಿದೆ.

error: Content is protected !!
Scroll to Top