ಮಂಗಳೂರು: ಹೋಟೆಲ್​ ಸ್ವಿಮ್ಮಿಂಗ್ ಪೂಲ್​ನಲ್ಲಿ ಮುಳುಗಿ ಬ್ಯಾಂಕ್‌ ಅಧಿಕಾರಿ ಸಾವು

ನಿನ್ನೆ ಪಂಚತಾರಾ ಹೋಟೆಲ್‌ಗೆ ಬಂದು ತಂಗಿದ್ದ ಕೇರಳದ ಬ್ಯಾಂಕ್‌ ಅಧಿಕಾರಿ

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಪಂಚತಾರಾ ಹೊಟೇಲ್‌ನ ಈಜು ಕೊಳದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮೋತಿ ಮಹಲ್ ಹೊಟೇಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್. ನಾಯರ್ ಎಂದು ಗುರುತಿಸಲಾಗಿದೆ.
ಯೂನಿಯನ್ ಬ್ಯಾಂಕ್ ಅಧಿಕಾರಿಯಾದ ಗೋಪು ಆರ್. ನಾಯರ್ ಸೆ.10ರಂದು ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್‌ನಲ್ಲಿ ಉಳಿದು ಕೊಂಡಿದ್ದರು. ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ ಕೊಠಡಿಯಿಂದ ಹೊರ ಹೋಗಿದ್ದರು. ಬಳಿಕ ಅವರನ್ನು ಯಾರೂ ನೋಡಿರಲಿಲ್ಲ. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!
Scroll to Top