ಕೊಲಂಬೊ: ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಲ್ಲಿನ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾದಾಟ ನಡೆಸುತ್ತಿವೆ. ಆದರೆ, ಭಾನುವಾರ ಭಾರಿ ಮಳೆಯಿಂದಾಗಿ ಈ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮೀಸಲು ದಿನವಾದ ಸೋಮವಾರವೂ ಮಳೆಯಿಂದಾಗಿ ಆಟ ತಡವಾಗಿ ಶುರುವಾಗಲಿದೆ. ಮೈದಾನ ಸಂಪೂರ್ಣ ತೇವವಾಗಿರುವ ಕಾರಣ ಆಟವನ್ನು ತಡವಾಗಿ ಆರಂಭಿಸಲಾಗುತ್ತದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ರೋಹಿತ್ ಶರ್ಮಾ ಹಾಗೂ ಶೂಭಮನ್ ಗಿಲ್ ಅರ್ಧಶತಕಗಳ ಬಲದಿಂದ ಭರ್ಜರಿ ಆರಂಭ ಪಡೆದಿತ್ತು. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಔಟ್ ಆಗುವುದಕ್ಕೂ ಮುನ್ನ ಕ್ರಮವಾಗಿ 56 ಮತ್ತು 58 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಕ್ರೀಸ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಏಷ್ಯಾಕಪ್ 2023 : ಪಾಕ್ – ಭಾರತ ಪಂದ್ಯ – ಮೀಸಲು ದಿನವೂ ಮಳೆಯದ್ದೇ ಆಟ
