ಪ್ರಗತಿಗೆ ಕಾರಣರಾದವರು ಸದಾ ಸ್ಮರಣೀಯರು : ವಿನಯ ಹೆಗ್ಡೆ

ಪಿಎಚ್‌ಡಿ ಪದವಿ ಪಡೆದ ಪ್ರಾಧ್ಯಾಕರಿಗೆ ಸನ್ಮಾನ

ಕಾರ್ಕಳ : ಗುರುವೆಂಬವನು ಶಿಕ್ಷಣ ನೀಡುವುದರೊಂದಿಗೆ ಜೀವನ ನಡೆಸುವ ಮಾರ್ಗದರ್ಶಕನಾಗಿರುವನು. ದೇಶದ ಅಭ್ಯುದಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಅಪಾರವಾದುದು. ಅಂತೆಯೇ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರೊ. ಜಿ.ಆರ್. ರೈ ಅವರಂತಹ ಮೇರು ವ್ಯಕ್ತಿಗಳ ಕೊಡುಗೆ ಸ್ಮರಣೀಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ, ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.

ಅವರು ಶನಿವಾರ ನಿಟ್ಟೆ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ಸೆಂಟರ್ ನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಧಾರಣೆ ಕಾಣಲು ಸಾಧ್ಯ
ಶಿಕ್ಷಕರು ಹಾಗೂ ಇಂಜಿನಿಯರ್ ಗಳು ಸಮಾಜದ ವಿವಿಧ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿದಲ್ಲಿ ಸಾಕಷ್ಟು ಸುಧಾರಣೆ ಕಾಣಲು ಸಾಧ್ಯ. ಸಮಾಜದ ಏಳಿಗೆಗಾಗಿ ತೊಡಗಿಸಿಕೊಳ್ಳುವ ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಟ್ಟೆ ಸಂಸ್ಥೆಯ ಆಡಳಿತ ಮಂಡಳಿ ಸದಾ ಪ್ರೋತ್ಸಾಹ ನೀಡಲಿದೆ ಎಂದು ವಿನಯ ಹೆಗ್ಡೆ ತಿಳಿಸಿದರು.

ಬೆಳೆದು ಬಂದ ಹಾದಿ ಮರೆಯಬಾರದು – ಪ್ರೊ. ಜಿ. ಆರ್.‌ ರೈ
ಇಂಜಿನಿಯರ್ ದಿನಾಚರಣೆಯ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಟ್ಟೆ ತಾಂತ್ರಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ ರಘುನಾಥ್ ರೈ ಮಾತನಾಡಿ ಪ್ರತಿಯೋರ್ವ ಮಾನವನೂ ಅವನವನ ಸ್ಥಾನವನ್ನು ಹಾಗೂ ಕರ್ತವ್ಯಗಳನ್ನರಿತರೆ ಉನ್ನತಿ ಕಾಣಲು ಸಾಧ್ಯ. ಅಂತೆಯೇ ನಾವು ಬೆಳೆದು ಬಂದ ಹಾದಿಯನ್ನು ನಾವು ಎಂದಿಗೂ ಮರೆಯಬಾರದು ಎಂದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ ಮುಗೇರಾಯ ಕಾರ್ಯಕ್ರಮಕ್ಕೆ ಶುಭಕೋರಿದರು.

ಪಿಎಚ್ ಡಿ ಪದವಿ ಪಡೆದ ಪ್ರಾಧ್ಯಾಪಕರಿಗೆ ಸನ್ಮಾನ
2022- 2023 ನೇ ಶೈಕ್ಷಣಿಕ ಸಾಲಿನಲ್ಲಿ ಪಿಎಚ್‌ಡಿ ಪದವಿ ಪಡೆದ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಹರ್ಷಿತಾ ಎಂ. ಜತ್ತನ್ನ, ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಷಣ್ಮುಖ ಶೆಟ್ಟಿ, ಕಂಪ್ಯೂಟರ್‌ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ| ಸಂದೀಪ್ ಕುಮಾರ್ ಹೆಗ್ಡೆ, ಸಹಪ್ರಾಧ್ಯಾಪಕಿ ಡಾ| ಪಲ್ಲವಿ ಕೆ.ಎನ್., ಸಹಾಯಕ ಪ್ರಾಧ್ಯಾಪಕರಾದ ಡಾ| ವಿಜಯ ಮುರಾರಿ ಟಿ, ಡಾ| ರಾಜಲಕ್ಷ್ಮೀ ಹೆಗ್ಡೆ, ಡಾ| ಶಶಾಂಕ್ ಶೆಟ್ಟಿ, ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪದ್ಮಾವತಿ ಕೆ., ಸಹಾಯಕ ಪ್ರಾಧ್ಯಾಪಕಿ ಡಾ| ಕವಿತಾ ಎಸ್., ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಸುರೇಶ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ| ದಿವಿಜೇಶ್ ಪುಣಿಂಚತ್ತಾಯ ಪಿ., ರೋಬೋಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎ. ಆದರ್ಶ್ ರೈ, ಗಣಿತಶಾಸ್ತ್ರ ವಿಭಾಗದ ಡಾ| ಚೈತ್ರಾ ಕೆ., ದೈಹಿಕ ಶಿಕ್ಷಣ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಗಣೇಶ್ ಪೂಜಾರಿ ಹಾಗೂ ಕಾಲೇಜಿನ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಡಾ| ಪ್ರೀತಮ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ನೀಡುವ ಡಿಶ್ಟಿಂಗ್ವಿಶ್ಡ್ ಟೀಚರ್ ಅವಾರ್ಡ್ ಗೆ ಭಾಜನರಾದ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ| ಶಿವಪ್ರಕಾಶ ಕೆ.ಎಸ್., ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಸ್ನೇಹಾ ನಾಯಕ್, ಡಿಶ್ಟಿಂಗ್ವಿಶ್ಡ್ ರಿಸರ್ಚರ್ ಅವಾರ್ಡ್ ಗೆ ಆಯ್ಕೆಯಾದ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಲೊಯಲಾ ಹಾಗೂ ಬೆಸ್ಟ್ ರಿಸರ್ಚ್ ಪೇಪರ್ ಅವಾರ್ಡ್ ಗೆ ಆಯ್ಕೆಯಾದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ಯಾಮ್ ಪ್ರಸಾದ್ ಸಜಂಕಿಲ ಅವರನ್ನೂ ಗೌರವಿಸಲಾಯಿತು.

ನಿಟ್ಟೆ ಕ್ಯಾಂಪಸ್‌ ಮೈಂಟೆನೆನ್ಸ್ & ಡೆವಲಪ್ಮೆಂಟ್ ನಿರ್ದೇಶಕ ಎ. ಯೋಗೀಶ್ ಹೆಗ್ಡೆ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ಐ. ರಮೇಶ್ ಮಿತ್ತಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕಿಯರಾದ ಡಾ| ವಿದ್ಯಾ ಹಾಗೂ ಡಾ| ವಿದ್ಯಾ ಕುಡ್ವ ಪ್ರಾರ್ಥಿಸಿದರು. ಪ್ರಥಮ ವರ್ಷದ ಕಾರ್ಡಿನೇಟರ್ ಡಾ| ಜಾಯ್ ಮಾರ್ಟೀಸ್ ಶಿಕ್ಷಕರ ಹಾಗೂ ಇಂಜಿನಿಯರ್ಸ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ರೆಸಿಡೆಂಟ್ ಇಂಜಿನಿಯರ್ ಡಾ| ಶ್ರೀನಾಥ್ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಡಾ| ಶ್ರೀನಿವಾಸ ರಾವ್ ಬಿ.ಆರ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಡಾ| ನರಸಿಂಹ ಬೈಲ್ಕೇರಿ, ಡೀನ್ ಸ್ಟೂಡೆಂಟ್ ವೆಲ್ಫೇರ್ ವಂದಿಸಿದರು. ಹ್ಯೂಮ್ಯಾನಿಟೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.error: Content is protected !!
Scroll to Top