ಜಿ20 ಶೃಂಗಸಭೆ ಮುಕ್ತಾಯ : ಮುಂದಿನ ಸಭೆಯ ಆತಿಥ್ಯ ವಹಿಸಲಿರುವ ಬ್ರೆಜಿಲ್‌ಗೆ ಅಧಿಕಾರ ದಂಡ ಹಸ್ತಾಂತರ

ನವದೆಹಲಿ : ಮುಂದಿನ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ವರ್ಗಾಯಿಸುವ ಮೂಲಕ ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗಸಭೆ ಸೆ. 10 ರಂದು ಮುಕ್ತಾಯಗೊಂಡಿದೆ. ಜಿ20 ಅಧ್ಯಕ್ಷ ಸ್ಥಾನದ ಅಧಿಕಾರದ ದಂಡವನ್ನು ವಿದ್ಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರು, ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡುತ್ತಿರುವ ಭಾರತವನ್ನು ಶ್ಲಾಘಿಸಿದರು.

ಸಮಾರೋಪ ಅಧಿವೇಶನದಲ್ಲಿ ಮೋದಿ ಅವರು ಗೇಲ್‌ನ್ನು ಹಸ್ತಾಂತರಿಸಿ ಬ್ರೆಜಿಲ್ ಅಧ್ಯಕ್ಷ ಸ್ಥಾನಕ್ಕೆ ಶುಭ ಹಾರೈಸಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ 1 ರಂದು ಗಣ್ಯಗುಂಪಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

ನವೆಂಬರ್‌ನಲ್ಲಿ ವರ್ಚುವಲ್ ಸಭೆ
ನವೆಂಬರ್​​ನಲ್ಲಿ ಜಿ20 ವರ್ಚುವಲ್ ಅಧಿವೇಶನ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ನವೆಂಬರ್​ವರೆಗೆ ಜಿ20 ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕೆ ಇದೆ. ಈ ಎರಡು ದಿನಗಳಲ್ಲಿ ವಿಶ್ವ ನಾಯಕರು ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ವಿವಿಧ ಪ್ರಸ್ತಾಪಗಳನ್ನು ತಿಳಿಸಿದ್ದಾರೆ.









































































































































































error: Content is protected !!
Scroll to Top