ಅಂತಾರಾಷ್ಟ್ರೀಯ ಒಲಿಂಪಿಯಾಡ್ ಫಾರ್ ಇಂಫಾರ್ಮಾಟಿಕ್ಸ್​ : ದ್ವಿತೀಯ ಬಾರಿ ಚಿನ್ನ ಗೆದ್ದ ಭಾರತ

ಹಂಗೇರಿ ಸ್ಜೆಡ್‌ : ನಾಲ್ಕು ವಿದ್ಯಾರ್ಥಿಗಳ ತಂಡವು ಅಂತಾರಾಷ್ಟ್ರೀಯ ಒಲಿಂಪಿಯಾಡ್ ಫಾರ್ ಇಂಫಾರ್ಮಾಟಿಕ್ಸ್​ನಲ್ಲಿ 2023 ಭಾಗವಹಿಸಿದರು. ಇದು ಪ್ರಪಂಚದಾದ್ಯಂತ ಅಗ್ರ ಐದು ವಿಜ್ಞಾನ ಒಲಂಪಿಯಾಡ್‌ಗಳಲ್ಲಿ ಒಂದಾಗಿದೆ. ಭಾರತ ಕಳೆದ 22 ವರ್ಷಗಳಿಂದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಈ ವರ್ಷ ಒಂಬತ್ತು ವರ್ಷಗಳ ನಂತರ ಭಾರತ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. 2014ರಲ್ಲಿ ಇನ್‌ಫರ್ಮ್ಯಾಟಿಕ್ಸ್‌ಗಾಗಿ ನಡೆದ ಇಂಟರ್‌ನ್ಯಾಶನಲ್ ಒಲಿಂಪಿಯಾಡ್‌ನಲ್ಲಿ ಭಾರತ ತಂಡವು ಚಿನ್ನದ ಪದಕ ಜಯಿಸಿತ್ತು.

ಭಾರತವನ್ನು ನಾಲ್ಕು ವಿದ್ಯಾರ್ಥಿಗಳು ಪ್ರತಿನಿಧಿಸಿದರು ಮತ್ತು ಅವರೆಲ್ಲರೂ ಪದಕಗಳನ್ನು ಗೆದ್ದಿದ್ದಾರೆ. ಕ್ಷಿತಿಜ್ ಸೋದಾನಿ ಚಿನ್ನದ ಪದಕ, ಪರಸ್ ಕಸ್ಮಾಲ್ಕರ್ ಮತ್ತು ಶ್ರೇಯಾನ್ ರೇ ಬೆಳ್ಳಿ ಪದಕ ಮತ್ತು ಸುಶೀಲ್ ರಾಜಾ ಯು ಕಂಚಿನ ಪದಕ ಪಡೆದರು. ಚೆನ್ನೈ ಮ್ಯಾಥಮೆಟಿಕಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಮಾಧವನ್ ಮುಕುಂದ್ ಮತ್ತು ಐಐಟಿ ದೆಹಲಿಯ ಜತಿನ್ ಯಾದವ್ ನೇತೃತ್ವದಲ್ಲಿ ತಂಡವನ್ನು ಮುನ್ನಡೆಸಲಾಯಿತು. ಸ್ಪರ್ಧೆಯು ಹಂಗೇರಿಯ ಸ್ಜೆಡ್‌ನಲ್ಲಿ ನಡೆಯಿತು.

error: Content is protected !!
Scroll to Top