ಬಾನೆತ್ತರದಲ್ಲಿ ತೇಲಾಡಿದ ಜಿ20 ಶೃಂಗಸಭೆ ಧ್ವಜ : ಸ್ಕೈಡೈವಿಂಗ್ ಮೂಲಕ ಸಭೆಗೆ ಶುಭಕೋರಿದ ವ್ಯಕ್ತಿ

ದೆಹಲಿ : ರಾಷ್ಟ್ರರಾಜಧಾನಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ಅನೇಕ ದೇಶದ ನಾಯಕರುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಈ ಸಭೆ ಆರಂಭವಾಗಿದ್ದು, ಆಫ್ರಿಕಾವನ್ನು ಜಿ20 ಸಭೆಯ ಸದಸ್ಯರಾಗಿ ಸೇರಿಸಿಕೊಳ್ಳಲಾಗಿದೆ. ಈ ನಡುವೆ ಜಿ20ಗೆ ವ್ಯಕ್ತಿಯೊಬ್ಬರು ವಿಭಿನ್ನವಾಗಿ ಶುಭಕೋರಿರುವ ವಿಡಿಯೋ ವೈರಲ್​​​ ಆಗಿದೆ. ಜಿ20 ಧ್ವಜವನ್ನು ಹಿಡಿದುಕೊಂಡು ಸ್ಕೈಡೈವಿಂಗ್ ಮಾಡುವ ಮೂಲಕ ಜಿ20ಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಭಾರತದ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಜಿ20 ಧ್ವಜವನ್ನು ಹಿಡಿದುಕೊಂಡು ಆಕಾಶದಲ್ಲಿ ತೇಲಾಡುತ್ತಾ ಶೃಂಗಸಭೆಗೆ ಶುಭಕೋರಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಯ ನೂತನವಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಹಲವು ದೇಶಗಳ ನಾಯಕರುಗಳು ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲಿ ಈ ಸಭೆಗೆ ಈ ವ್ಯಕ್ತಿ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಇನ್ನು ಈ ವಿಡಿಯೊವನ್ನು ಹಂಚಿಕೊಂಡ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ನನಗೆ ಈ ವಿಡಿಯೋ ತುಂಬಾ ಇಷ್ಟವಾಯಿತು ಎಂದು ಟ್ವಿಟರ್​​ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಆದರೆ ವಿಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಣಗೊಂಡಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.error: Content is protected !!
Scroll to Top