ಸಿವಿಲ್‌ ಇಂಜಿನಿಯರ್ಸ್ ಅಸೋಸಿಯೇಶನ್‌ ಅಧ್ಯಕ್ಷರಾಗಿ ಮಂಜುನಾಥ ಹೆಗ್ಡೆ – ಕಾರ್ಯದರ್ಶಿಯಾಗಿ ಪ್ರಕಾಶ್‌ ಆಚಾರ್ಯ

ಸೆ. 15 : ಇಂಜಿನಿಯರ್ಸ್ ಡೇ – ಪದಪ್ರದಾನ

ಕಾರ್ಕಳ : ಕಾರ್ಕಳ ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಶನ್‌ ನೂತನ ಅಧ್ಯಕ್ಷರಾಗಿ ಹೆರ್ಮುಂಡೆ ಗ್ರಾಮದ ಮಂಜುನಾಥ ಹೆಗ್ಡೆ ಹಾಗೂ ಕಾರ್ಯದರ್ಶಿಯಾಗಿ ಕಾರ್ಕಳದ ಪ್ರಕಾಶ್‌ ಆಚಾರ್ಯ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಪ್ರಕಾಶ್‌ ಹೊಟೇಲ್‌ ನಲ್ಲಿ ನಡೆದ ಅಸೋಸಿಯೇಶನ್‌ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರಾಗಿ ವಿಜಯ್‌ರಾಜ್‌ ಶೆಟ್ಟಿ, ಕೋಶಾಧಿಕಾರಿ- ನವೀನ್‌ ಕುಮಾರ್‌, ಜೊತೆ ಕಾರ್ಯದರ್ಶಿ – ಸುಕೇಶ್‌, ಸಾಂಸ್ಕೃತಿಕ ಕಾರ್ಯದರ್ಶಿ – ಸುಶಾಂತ್‌ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ – ಪ್ರಸಾದ್‌ ಶೆಟ್ಟಿ, ತಾಂತ್ರಿಕ ಕಾರ್ಯದರ್ಶಿ – ಅನಿಶ್‌ ತೆಂಡುಲ್ಕರ್‌, ಗೌರವ ಸಲಹೆಗಾರರಾಗಿ ಶ್ರೀನಿವಾಸ್‌ ಜೆ. ಕೆ. ಪೈ, ಶಶಿಕಾಂತ ರೈ, ಅರುಣ್‌ ಕುಮಾರ್‌ ಶೆಟ್ಟಿ, ಎಚ್.‌ ರಾಜಣ್ಣ, ಎನ್.‌ ಎಂ. ಹೆಗ್ಡೆ, ಕಾನೂನು ಸಲಹೆಗಾರ – ಐ. ಆರ್.‌ ಬಲ್ಲಾಳ್‌ ಹಾಗೂ ಲೆಕ್ಕ ಪರಿಶೋಧಕರಾಗಿ ಪ್ರಭಾತ್‌ ಕುಮಾರ್‌ ಜೈನ್‌ ಅವರನ್ನು ಆಯ್ಕೆ ಮಾಡಲಾಯಿತು.

ಇಂಜಿನಿಯರ್ಸ್ ಡೇ – ಪದಪ್ರದಾನ
ಸೆ. 15ರ ಶುಕ್ರವಾರ ಸಂಜೆ 6-30ಕ್ಕೆ ಹೋಟೆಲ್‌ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಇಂಜಿನಿಯರ್ಸ್‌ ಡೇ ಆಚರಣೆ ಮತ್ತು ಪದಗ್ರಹಣ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಶಾಸಕ, ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಉದ್ಘಾಟಿಸಲಿರುವರು. ಅಸೋಸಿಯೇಶನ್‌ ಅಧ್ಯಕ್ಷ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ & ಪ್ಲಾನಿಂಗ್‌ ಮಣಿಪಾಲ ಇಲ್ಲಿನ ಪ್ರಾಧ್ಯಾಪಕ ಪ್ರೋ. ಪ್ರಕಾಶ್‌ ರಾವ್‌, ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ ಡಾ. ಹರಿಶ್‌ ಕುಮಾರ್‌ ಕೆ. ಹಾಗೂ ಉಡುಪಿ ಅಲ್ಟ್ರಾಟೆಕ್‌ ಸಿಮೆಂಟ್‌ ಲಿಮಿಟೆಡ್‌ನ ಚಾನಲ್‌ ರಿಲೇಶನ್‌ಶಿಪ್‌ ಮ್ಯಾನೇಜರ್‌ ಸಂಜೀವ ಕುಮಾರ್‌ ಭಾಗವಹಿಸಲಿದ್ದಾರೆ.

ಸನ್ಮಾನ – ಪ್ರತಿಭಾ ಪುರಸ್ಕಾರ
ಕಾರ್ಕಳ ರೈ ಕನ್ಸಲ್ಟಿಂಗ್‌ ಇಂಜಿನಿಯರ್ಸ್‌ನ ಶಶಿಕಾಂತ್‌ ರೈ ಅವರಿಗೆ ಸನ್ಮಾನ ಮತ್ತು ಸಿವಿಲ್‌ ಇಂಜಿನಿಯರ್ಸ್‌ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.































































































































































error: Content is protected !!
Scroll to Top