ವಾಲಿಬಾಲ್‌ ಪಂದ್ಯಾಟ : ಕ್ರೈಸ್ಟ್‌ಕಿಂಗ್‌ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ಸತತ ಎರಡನೇ ಬಾರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.

ವಿದ್ಯಾರ್ಥಿಗಳಾದ ಶಗುನ್ ಎಸ್. ವರ್ಮಾ, ಶೈನಿ ಡಿ’ಸೋಜಾ, ಅವ್ನಿ ಆರ್ ಕುಮಾರ್, ಸಾದಿಯ ಮೆಹರ್, ದಿತ್ಯ ಶೆಟ್ಟಿ (7ನೇ ತರಗತಿ), ಫಿಯೋನ ಪಿಂಟೋ, ಶಾನ್ವಿ ಶೆಟ್ಟಿ, ಐಶ್ವರ್ಯ, ಪಾವನಿ (6ನೇ ತರಗತಿ) ತಂಡವನ್ನು ಪ್ರತಿನಿಧಿಸಿದ್ಧರು. ಮುಂದೆ ಕುಂದಾಪುರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಕಾರ್ಕಳ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯಕ್ ಹಾಗೂ ಲಾವಣ್ಯ ಶೆಟ್ಟಿ ತಂಡದ ನೇತೃತ್ವ ವಹಿಸಿದ್ದರು.













































































































































































error: Content is protected !!
Scroll to Top