ಬೆಂಗಳೂರು ರೈಲು ಮುರ್ಡೇಶ್ವರಕ್ಕೆ ವಿಸ್ತರಣೆ

ಮೈಸೂರು ಮಾರ್ಗವಾಗಿ ನಿತ್ಯ ಸಂಚಾರ

ಉಡುಪಿ : ಮೈಸೂರು ಮಾರ್ಗವಾಗಿ ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು (ರೈಲು‌ ಸಂಖ್ಯೆ 16585) ಮುರುಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ. ಇದರೊಂದಿಗೆ ಕುಂದಾಪುರ ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜಧಾನಿ ಬೆಂಗಳೂರು ಹಾಗು ಮೈಸೂರಿಗೆ ಪ್ರಯಾಣಿಸಲು ನಿತ್ಯ ರೈಲೊಂದು ಸಿಕ್ಕಂತಾಗಿದೆ.
ಕುಂದಾಪುರ ರೈಲ್ವೇ ಸಮಿತಿ ಕಳೆದ ಒಂದೂವರೆ ವರ್ಷದಿಂದ ಈ ರೈಲಿಗಾಗಿ ಸತತ ಹೋರಾಟ ನಡೆಸಿತ್ತು. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಪ್ರಯತ್ನವೂ ಸೇರಿ ರೈಲು ಮುರ್ಡೇಶ್ವರದ ತನಕ ವಿಸ್ತರಣೆಯಾಗಿದೆ. ಬೈಯಪ್ಪನ ಹಳ್ಳಿಯಿಂದ ಹೊರಟು ರಾತ್ರಿ 9 ಗಂಟೆಗೆ ಮೆಜೆಸ್ಟಿಕ್‌ಗೆ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು, ಉಡುಪಿ, ಕುಂದಾಪುರ ಮೂಲಕ ಸಂಚರಿಸಲಿದೆ. ಮಧ್ಯಾಹ್ನ 3.30ಗೆ ಕರಾವಳಿಯಿಂದ ಹೊರಡುವ ರೈಲು ಬೆಳಿಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ.













































































































































































error: Content is protected !!
Scroll to Top