INDIA ಎಂದರೆ ಪದ, ಭಾರತ ಎಂದರೆ ಭಾವನೆ – ಸುನಿಲ್‌ ಕುಮಾರ್

ಕಾಂಗ್ರೆಸಿಗರಿಗೆ ನಾಡಗೀತೆಯಲ್ಲಿರುವ ಸರ್ವಜನಾಂಗದ ಶಾಂತಿಯ ತೋಟ‌ ಸಾಕೋ ?

ಕಾರ್ಕಳ : ದೇಶಕ್ಕೆ ಇಂಡಿಯಾ ಬದಲು ಭಾರತ ಎಂಬ ಹೆಸರನ್ನು ಇಟ್ಟಾಗ ಮೂಡುವ ಭಾವ, ಭಕುತಿಗಳೇ ಬೇರೆ. ಸನಾತನ ಭಾರತ ವರ್ಷ ನಮ್ಮ ಮುಂದೆ ಸೃಷ್ಟಿಯಾಗುತ್ತದೆ. ಇದಕ್ಕಾಗಿಯೇ ರಾಷ್ಟ್ರಗೀತೆ ಮತ್ತು ನಾಡಗೀತೆಯಲ್ಲಿ ಕವಿಗಳು ಇಂಡಿಯಾ ಬದಲು ಭಾರತ ಎಂಬ ಶಬ್ದ ಪ್ರಯೋಗವನ್ನು ಮಾಡಿರಬಹುದು ಎಂದು ಮಾಜಿ ಸಚಿವ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಹೆಸರಲ್ಲೇನಿದೆ..?
ಈ ಸಂಬಂಧಿಸಿದಂತೆ ಟ್ವೀಟರ್ ಮತ್ತು ಫೇಸ್‌ ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿರುವ ಅವರು, ಭಾರತ ಎಂದು ಹೆಸರು ಬದಲಾವಣೆ ಮಾಡಿದ್ದನ್ನು ವಿರೋಧಿಸುವವರು ” ಹೆಸರಲ್ಲೇನಿದೆ ?” ಎಂಬ ವಾದ ಮುಂದಿಟ್ಟಿದ್ದಾರೆ. ಅಂಥವರು ರಾವಣ, ದುಶಾಃಸನ, ಘಟೋತ್ಗಚ, ಶೂರ್ಪನಖಿ, ಒಸಮಾ ಬಿನ್ ಲಾಡೆನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದಲ್ಲ ? ಹೆಸರಲ್ಲೇನಿದೆ ? ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್‌ ಮುಂದುವರಿಸಿರುವ ಅವರು ಕಾಂಗ್ರೆಸಿಗರಿಗೆ ನಾಡಗೀತೆಯಲ್ಲಿರುವ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಾಲು ಮಾತ್ರ ಸಾಕೋ ಅಥವಾ ಜಯ ಭಾರತ ಜನನಿಯ ತನುಜಾತೆಯೂ ಬೇಕೋ ? ಎಂದಿದ್ದಾರೆ.
ಇನ್ನು ಪೇಸ್‌ಬುಕ್‌ ಪೇಜ್‌ನಲ್ಲಿ ಭಾರತ ಎಂದು ಹೇಳುವುದಕ್ಕೆ ನಮಗೆ ಅಭಿಮಾನವಿದೆ, ಸ್ವಾಭಿಮಾನವಿದೆ. ನಮ್ಮ ದೇಶವನ್ನು INDIA ಅನ್ನುವುದಕ್ಕಿಂದ ʻಭಾರತʼ ಎಂದು ಹೇಳಲು ಅದರಲ್ಲೊಂದು ಭಾವನೆಯಿದೆ, ಎದೆಗಾರಿಕೆಯಿದೆ ಎಂದು ಬರೆದುಕೊಂಡಿದ್ದಾರೆ.error: Content is protected !!
Scroll to Top