ಸೂಕ್ತ ಉತ್ತರ ನೀಡಬೇಕಿದೆ : ಸನಾತನ ಧರ್ಮ ವಿವಾದ ಕುರಿತು ಸಚಿವರಿಗೆ ಮೋದಿ ಸೂಚನೆ

ಹೊಸದಿಲ್ಲಿ : ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಮರ್ಪಕ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗೂ ಮುನ್ನ ಆಯೋಜಿಸಿದ್ದ ಸಂಪುಟ ಸಚಿವರ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಇತಿಹಾಸಕ್ಕೆ ಹೋಗುವ ಅಗತ್ಯವಿಲ್ಲ. ಆದರೆ ಸಂವಿಧಾನದ ಪ್ರಕಾರ ಇರುವ ವಾಸ್ತವಾಂಶಗಳಿಗೆ ಅಂಟಿಕೊಳ್ಳಿ. ಹಾಗೆಯೇ ವಿಷಯದ ಸಮಕಾಲೀನ ಪರಿಸ್ಥಿತಿ ಕುರಿತು ಮಾತನಾಡಿ ಎಂದು ಸಚಿವರಿಗೆ ಮೋದಿ ಸಲಹೆ ನೀಡಿದರು.
ಹಾಗೆಯೇ ಮಂಗಳವಾರ ಹೊಸದಾಗಿ ಶುರುವಾಗಿರುವ ಇಂಡಿಯಾ ಹಾಗೂ ಭಾರತ ಹೆಸರಿನ ವಿವಾದದ ಕುರಿತು ಯಾವುದೇ ಹೇಳಿಕೆ ನೀಡದೆ ದೂರ ಇರುವಂತೆಯೂ ಮೋದಿ ಸೂಚನೆ ನೀಡಿದ್ದಾರೆ. ಈ ವಿಷಯದ ಕುರಿತು ಅಧಿಕಾರ ನೀಡಿರುವ ವ್ಯಕ್ತಿಗಳು ಮಾತ್ರವೇ ಮಾತನಾಡಬೇಕು ಎಂದಿದ್ದಾರೆ.error: Content is protected !!
Scroll to Top