ಕಾರ್ಕಳ ತಾಲೂಕು ಉತ್ತಮ ಹಾಲು ಉತ್ಪಾದಕರ ಸಹಕಾರ ಸಂಘ

ಪಳ್ಳಿ ಪ್ರಥಮ – ಕಾಂತಾವರ ದ್ವಿತೀಯ

ಕಾರ್ಕಳ : ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2022-23ನೇ ಸಾಲಿನ ಕಾರ್ಕಳ ತಾಲೂಕಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘ ವಿಭಾಗದಲ್ಲಿ ಪಳ್ಳಿ ಸಂಘ ಪ್ರಥಮ ಹಾಗೂ ಕಾಂತಾವರ ಸಂಘ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ.
ಪಳ್ಳಿ ಹಾಲು ಉತ್ಪದಕರ ಸಹಕಾರ ಸಂಘದ ಕಾರ್ಯದರ್ಶಿ ಆನಂದ್‌ ಎಸ್.‌ ಪೂಜಾರಿಯವರಿಗೆ ಉತ್ತಮ ಕಾರ್ಯದರ್ಶಿ ಎಂಬ ಪ್ರಶಸ್ತಿ ಲಭಿಸಿದೆ. ಕಾಂತಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಜಯಂತಿ ಎಸ್. ಪೂಜಾರಿ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತೆ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ. 5 ರಂದು ಮಂಗಳೂರು ಕುಲಶೇಖರ ಕೊರ್ಡೈಲ್ ಹಾಲ್ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕಡಂದಲೆ, ಕಾರ್ಕಳ ತಾಲೂಕಿನ ನಿರ್ದೇಶಕರಾದ ಸದಾಶಿವ ಶೆಟ್ಟಿ ಬೋಳ, ನರಸಿಂಹ ಕಾಮತ್, ಸಾಣೂರು, ಸುಧಾಕರ್ ಶೆಟ್ಟಿ ಮುಡಾರು, ಸ್ಮಿತಾ ಆರ್ ಶೆಟ್ಟಿ ಸೂಡ ಉಪಸ್ಥಿತರಿದ್ದರು.

ದ್ವಿತೀಯ ಸ್ಥಾನ ಪಡೆದ ಕಾಂತಾವರ ಸಂಘ






























































































































































error: Content is protected !!
Scroll to Top