ಪತಿ ತೀರಿಕೊಂಡ ಬೆನ್ನಲ್ಲೇ ಪತ್ನಿ ಆತ್ಮಹತ್ಯೆ

ಮಂಗಳೂರು : ಪತಿಯ ಅಗಲಿಕೆಯಿಂದ ನೋವಿನಿಂದ ಹೊರಬರಲಾರದೆ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸವಣೂರಿನಲ್ಲಿ ನಡೆದಿದೆ. ಮೃತರನ್ನು ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ, ದಿ| ದಿನೇಶ್ ಪೆರಿಯಡ್ಕ ಅವರ ಪತ್ನಿ , ರೂಪಾ (30 ವರ್ಷ) ಎಂದು ಗುರುತಿಸಲಾಗಿದೆ.
ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯವರು .ಎರಡು ವರ್ಷದ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆಗಸ್ಟ್‌ 7ರಂದು ದಿನೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ. ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.error: Content is protected !!
Scroll to Top