ಕರಕರಿ ಫ್ರೆಂಡ್ಸ್ : ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 2ನೇ ವರ್ಷದ ಭವತಿ ಭಿಕ್ಷಾಂ ದೇಹಿ ವಿಭಿನ್ನ ವೇಷ

ಕಾರ್ಕಳ : ಬೈಲೂರು ಕರಕರಿ ಫ್ರೆಂಡ್ಸ್ ಸೇವಾ ಬಳಗದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆ. 5 ರಂದು ಎರಡನೇ ವರ್ಷದ ಭವತಿ ಭಿಕ್ಷಾಂ ದೇಹಿ ವಿಭಿನ್ನ ವೇಷ ನಡೆಯಲಿದೆ. ಸಂಗ್ರಹವಾದ ಹಣದಲ್ಲಿ ಬೈಲೂರು ವ್ಯಾಪ್ತಿಯ ಜನತೆಯ ತುರ್ತು ಆರೋಗ್ಯ ಸೇವೆಗಾಗಿ ಉಚಿತ ಆಂಬುಲೆನ್ಸ್‌ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ತಂಡದ ಸದಸ್ಯ ವಿತಿನ್ ಶೆಟ್ಟಿ ವೇಷ ಧರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7619534298 (ಅಕ್ಷಯ್‌ ಕಾರ್ಕಳ) ಅಥವಾ 9902205358 (ಶ್ರೀನಿವಾಸ್‌ ಪೂಜಾರಿ) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.

error: Content is protected !!
Scroll to Top