ಕಬಡ್ಡಿ ಪಂದ್ಯಾಟ: ಮುನಿಯಾಲು, ನಿಟ್ಟೆ ಶಾಲೆ ಪ್ರಥಮ

ಮಾಳ ಕೂಡಬೆಟ್ಟು ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪಂದ್ಯ

ಕಾರ್ಕಳ: ತಾಲೂಕು ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಮಾಳ ಕೂಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶನಿವಾರ ನಡೆಯಿತು. ಬಾಲಕರ ವಿಭಾಗದಲ್ಲಿ ಮುನಿಯಾಲು, ಮಾಳ ಗುರುಕುಲ, ಬಾಲಕಿಯರ ವಿಭಾಗದಲ್ಲಿ ನಿಟ್ಟೆ, ಪೆರ್ವಾಜೆ ಶಾಲೆಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವು. ಪ್ರಥಮ ಸ್ಥಾನಿಯಾದವರು ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿಮಲಾ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ್ ಭಟ್, ಉಪಾಧ್ಯಕ್ಷೆ ಸುನೀತಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವಿಚಂದ್ರ ಕಾರಂತ್, ಮುಖ್ಯೋಪಾಧ್ಯಾಯಿನಿ ಪ್ರಭಾವತಿ, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎಸ್. ಪೂಜಾರಿ, ಶಾಲೆಯ ನಿಕಟಪೂರ್ವ ಮುಖ್ಯಶಿಕ್ಷಕ ಕೃಷ್ಣ ಮೊಯ್ಲಿ, ಮಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಹೆಗ್ಡೆ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಶಾಂತಾರಾಮ‌ ಮೆಹೆಂದಳೆ ಉಪಸ್ಥಿತರಿದ್ದರು. ಪ್ರಭಾವತಿ ಸ್ವಾಗತಿಸಿದರು,ಮಕ್ಕಳು ಪ್ರಾರ್ಥಿಸಿದರು, ರಾಧಾಕೃಷ್ಣ ಜೋಶಿ ನಿರೂಪಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ್ ಭಟ್ ವಹಿಸಿದ್ದರು. ಇಲಾಖೆಯ ಅಧಿಕಾರಿಗಳು, ಊರ ಹಿರಿಯರು,ಶಾಲಾ ಅಭಿಮಾನಿಗಳು ಈದ್ದರು.
ಶಿಕ್ಷಕಿ ಸ್ಟೆಫಿ ಶೈನಿ ಫೆರ್ನಾಂಡಿಸ್ ಬಹುಮಾನ ವಿಜೇತ ಮಕ್ಕಳ ವಿವರ ಓದಿದರು. ಶಿಕ್ಷಕಿ ಹರಿಣಿ ಧನ್ಯವಾದ ಅರ್ಪಿಸಿದರು. ರಾಧಾಕೃಷ್ಣ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.































































































































































error: Content is protected !!
Scroll to Top