33 ಸಚಿವರಿಗೆ ಸಿಗಲಿದೆ ಹೊಚ್ಚಹೊಸ ಕಾರು

ಎಲ್ಲ ಸಚಿವರಿಗೆ ಹೊಸ ಕಾರು ಖರೀದಿಸಲು ಸರಕಾರ ಆದೇಶ

ಬೆಂಗಳೂರು : ಜನರಿಗೆ ಪಂಚ ಗ್ಯಾರಂಟಿಗಳನ್ನು ಕೊಟ್ಟಿರುವ ಕಾಂಗ್ರೆಸ್‌ ಸರಕಾರ ಇದೀಗ ತನ್ನ ಸಂಪುಟದ ಎಲ್ಲ 33 ಸಚಿವರಿಗೆ ಹೊಸ ಕಾರು ಕೊಡಲು ನಿರ್ಧರಿಸಿದೆ.
ಸಿದ್ದರಾಮಯ್ಯ ಸಚಿವ ಸಂಪುಟದ ಎಲ್ಲ 33 ಸಚಿವರಿಗೆ ಶೀಘ್ರವೇ ಹೊಸ ಕಾರು ಸಿಗಲಿವೆ. 30 ಲಕ್ಷ ರೂಪಾಯಿ ಮೌಲ್ಯದ ಹೊಸ ಇನೋವಾ ಹೈಕ್ರಾಸ್ ಹೈಬ್ರೀಡ್ ಕಾರುಗಳನ್ನು ಸರ್ಕಾರ ಸಚಿವರಿಗಾಗಿ ಖರೀದಿಗೆ ಮುಂದಾಗಿದೆ.
ಸರ್ಕಾರ ಆದೇಶಿಸಿದ ಪ್ರತಿವಾಹನಕ್ಕೆ ಜಿಎಸ್‌ಟಿ ಸೇರಿದಂತೆ ಎಕ್ಸ್‌ ಶೋರೂಮ್ ಬೆಲೆ 30 ಲಕ್ಷ ರೂಪಾಯಿಯಂತೆ 9.90 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕಿರ್ಲೋಸ್ಕರ್ ಮೋಟಾರ್ಸ್‌ನಿಂದ ನೇರವಾಗಿ ಖರೀದಿಸಲು ಪಾರದರ್ಶಕತೆ ಅಧಿನಿಯಮದಡಿ ಸಿಬ್ಬಂದಿ ಮತ್ತು ಆಡಳಿತ ಸುಧಾಋಣೆ ಇಲಾಖೆ ಆದೇಶ ನೀಡಿದೆ.error: Content is protected !!
Scroll to Top