ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ – ಹೊಸಬೆಳಕು ಆಶ್ರಮದಲ್ಲಿ ರಕ್ಷಾಬಂಧನ

ಕಾರ್ಕಳ : ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ಸೆ. 1 ರಂದು ರಕ್ಷಾ ಬಂಧನ ಕಾರ್ಯಕ್ರಮ ನಡೆಸಲಾಯಿತು. ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಆಶ್ರಮದ ಹಿರಿಜೀವಗಳಿಗೆ ಭಾವನಾತ್ಮಕ ಸಹೋದರತ್ವದ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ರಕ್ಷೆಯನ್ನು ಕಟ್ಟಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ಮೂಡಿಸಿದರು. ಬಳಿಕ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿ ಸಹಭೋಜನದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಉಪಾಧ್ಯಕ್ಷೆ ಸವಿತಾ ಕೋಟ್ಯಾನ್, ಭೂ ನ್ಯಾಯ ಮಂಡಳಿ ಸದಸ್ಯ ವಿಕ್ರಂ ಹೆಗ್ಡೆ, ಉಪಾಧ್ಯಕ್ಷೆಯರಾದ ಜ್ಯೋತಿ ರಮೇಶ್‌, ಸುಪ್ರೀಯಾ ಶೆಟ್ಟಿ, ನಾಗವೇಣಿ, ಪಲ್ಲವಿ ಪ್ರವೀಣ್‌, ಪ್ರಧಾನ ಕಾರ್ಯದರ್ಶಿ ವಿನಯಾ ಡಿ. ಬಂಗೇರ ಹಾಗೂ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಆಶ್ರಮದ ಹಿರಿಯರಿಗೆ ಆರತಿ ಬೆಳಗಿದ ಕಾರ್ಯಕರ್ತೆಯರು


error: Content is protected !!
Scroll to Top