ಸೆ. 10 : ಮುದ್ದುಕೃಷ್ಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ

ಕಾರ್ಕಳ : ರೋಟರಿ ಕ್ಲಬ್‌ ಮತ್ತು ರೋಟರ‍್ಯಾಕ್ಟ್‌ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಸೆ. 10 ರಂದು ಬೆಳಿಗ್ಗೆ 9 ಗಂಟೆಯಿಂದ ಪೆರ್ವಾಜೆ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆಯಲ್ಲಿ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಜರುಗಲಿದೆ.

ಸ್ಪರ್ಧೆಗಳ ವಿವರ
ಮುದ್ದು ಕೃಷ್ಣ :
1-2 ವರ್ಷ (ಮುದ್ದುಕೃಷ್ಣ) 1 ನಿಮಿಷ + 30 ಸೆಕೆಂಡು
3-5 ವರ್ಷ (ಮುದ್ದುಕೃಷ್ಣ) 2 ನಿಮಿಷ + 1 ನಿಮಿಷ
0-03 ವರ್ಷ (ಯಶೋಧಾ, ಕೃಷ್ಣ) 2 ನಿಮಿಷ + 1 ನಿಮಿಷ
1ರಿಂದ 3ನೇ ತರಗತಿ (ಕೃಷ್ಣ, ರಾಧೆ) 2 ನಿಮಿಷ + 1 ನಿಮಿಷ
4ರಿಂದ 6ನೇ ತರಗತಿ (ಭಕ್ತಿಗೀತೆ ಸ್ಪರ್ಧೆ) 2 ನಿಮಿಷ + 1 ನಿಮಿಷ
7ರಿಂದ 10 ತರಗತಿ (ಏಕಪಾತ್ರಭಿನಯ, ಪೌರಾಣಿಕ ವಿಷಯ) 2 ನಿಮಿಷ + 1 ನಿಮಿಷ

ಚಿತ್ರ ರಚನೆ :
1-3 ತರಗತಿ (ಗಣೇಶನ ಚಿತ್ರ)
4-6 ತರಗತಿ (ಗಣೇಶನ ಚಿತ್ರ)
7-10 ತರಗತಿ (ಶ್ರೀ ಕೃಷ್ಣನ ಚಿತ್ರ)
ಕಾಲೇಜು ವಿಭಾಗ (ನಾನು ಕಂಡಂತೆ ನನ್ನ ಕಾರ್ಕಳ)

ಸೂಚನೆ :
-ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಹಿನ್ನಲೆ ಸಂಗೀತ ಸಿಡಿಯನ್ನು ತಾವೇ ತರಬೇಕು. ಡ್ರಾಯಿಂಗ್ ಶೀಟನ್ನು ಸ್ಥಳದಲ್ಲಿಯೇ ನೀಡಲಾಗುವುದು.
-ಚಿತ್ರಕಲೆಗೆ 90 ನಿಮಿಷ ಅವಕಾಶ.
-ಯಶೋಧೆಯ ಪಾತ್ರವನ್ನು ತಾಯಿಯೇ ಮಾಡಬೇಕಾಗಿಲ್ಲ.
-ಕಾರ್ಯಕ್ರಮದ ನಂತರ ಬಹುಮಾನವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9591017352 ಅಥವಾ 8762665594 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































































































































error: Content is protected !!
Scroll to Top