ಆರೋಗ್ಯಧಾರ – ನೆಲನೆಲ್ಲಿಯ ಆರೋಗ್ಯ ಲಾಭಗಳು

ಮಳೆಗಾಲದಲ್ಲಿ ಹೇರಳವಾಗಿ ಬೆಳೆಯುವಂತಹ ಹಾಗೂ ಯಕೃತ್ತಿಗೆ ಶ್ರೇಷ್ಠ ದ್ರವ್ಯವೆನಿಸಿರುವಂತಹ ನೆಲನಲ್ಲಿಯ ಬಗ್ಗೆ ತಿಳಿದುಕೊಳ್ಳೋಣ.
ಒಂದು ಫೀಟ್ ಉದ್ದ ಬೆಳೆಯುವ ಈ ಸಸ್ಯ ಚಿಕ್ಕ ಚಿಕ್ಕ ಎಲೆ ಹಣ್ಣು ಹಾಗೂ ಹೂಗಳನ್ನು ಬಿಡುತ್ತದೆ. ಮಳೆಗಾಲದಲ್ಲಿ ಗಿಡ ಚಳಿಗಾಲದಲ್ಲಿ ಹೂ ತದನಂತರ ಹಣ್ಣನ್ನು ಬಿಡುತ್ತದೆ. ಸಂಸ್ಕೃತದಲ್ಲಿ ಇದನ್ನು ಬುಮ್ಯಾಮ್ಲಕಿ ಎಂದು ಕರೆಯುತ್ತಾರೆ.
Latin name – Phyllanthus urinaria

ಭೂಮಿ ಆಮ್ಲಕ್ಕಿಯ ಗುಣಗಳು – ಇದು ಲಘು ಹಾಗೂ ರೂಕ್ಷ ಗುಣ ಹೊಂದಿದೆ. ರುಚಿಯಲ್ಲಿ ಸಿಹಿ ಕಹಿ ಹಾಗೂ ಕಷಾಯ ರಸ. ಸ್ವಭಾವದಲ್ಲಿ ಶೀತ ವೀರ್ಯ, ಕಫ ಹಾಗೂ ಪಿತ್ತ ಶಾಮಕ ದ್ರವ್ಯವಿದು.

ಇದರ ಉಪಯೋಗಗಳು ಹೀಗಿವೆ

  • ಗಾಯ, ವ್ರಣ, ಚರ್ಮರೋಗ ಹಾಗೂ ನೇತ್ರ ರೋಗಗಳಲ್ಲಿ ಇದರ ಉಪಯೋಗ ಮಾಡುತ್ತಾರೆ. ಎಲೆಗಳಿಗೆ ಸೈಂದವ ಲವಣ ಬೆರೆಸಿ ಲೇಪ ಮಾಡಲಾಗುವುದು.
  • 15 ರಿಂದ 20 ml ಎಲೆಯ ರಸ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಅರುಚಿ, ಅಜೀರ್ಣ, ಅಸಿಡಿಟಿ, ಜೋಂಡಿಸ್ ಗಳಲ್ಲಿ ಉಪಯುಕ್ತ.
  • ಬೇರಿನ ರಸ 15 ರಿಂದ 20 ml ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಕೆಮ್ಮು, ಅಸ್ತಮಾವನ್ನು ಕಡಿಮೆ ಮಾಡುತ್ತದೆ.
  • ಜ್ವರ, ಯಕೃತ್ ವಿಕಾರ, ಮೇದೋಜೀರಕ ವಿಕಾರಗಳಲ್ಲಿ 15ರಿಂದ 20 ಎಮ್ಎಲ್ ರಸವನ್ನು ನೀಡಿದರೆ ಅತ್ಯುತ್ತಮ ಪರಿಹಾರ ನೀಡುತ್ತದೆ.
  • ಸಕ್ಕರೆ ಕಾಯಿಲೆಯವರಿಗೆ ವಾರಕ್ಕೆ ಒಮ್ಮೆ ಇದರ ಕಷಾಯ ಸೇವಿಸುವುದು ಒಳ್ಳೆಯದು. ಒಂದು ಲೋಟ ನೀರಿಗೆ ಕೆಲವು ನೆಲೆ ನೆಲ್ಲಿಯ ಗಿಡಗಳನ್ನು ಹಾಕಿ ಅರ್ಧ ಬರುವವರೆಗೆ ಕುದಿಸಿ ನಂತರ ಸೋಸಿ ಸೇವಿಸಿರಿ.
  • ಟೈಪೋಯಡ್ ನಲ್ಲಿ ಕೂಡ ಇದೇ ರೀತಿ ಕಷ ಕಷಾಯವನ್ನು ಸೇವಿಸಿ.
  • ರಕ್ತವಿಕಾರಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. ರಕ್ತಸ್ರಾವವನ್ನು ತಡೆಯುತ್ತದೆ, ರಕ್ತಹೀನತೆಯನ್ನು ತಡೆಯುತ್ತದೆ. ಇದರ ಕಷಾಯ ವಾರಕ್ಕೆ ಮೂರು ಸಲ ಸೇವಿಸಬಹುದು.
  • ಸೇವಿಸುವ ಪ್ರಮಾಣ – ಎಲೆಯ ರಸ- 10 -20 ml
    ಚೂರ್ಣ – 3-6 g






























































































































































error: Content is protected !!
Scroll to Top