ಯು.ಟಿ.ಖಾದರ್‌ ನೂತನ ಸ್ಪೀಕರ್‌?

ಮಂಗಳೂರಿನ ಶಾಸಕನಿಗೆ ಉನ್ನತ ಹುದ್ದೆ

ಮಂಗಳೂರು: ವಿಧಾನಸಭೆಯ ಸ್ಪೀಕರ್ ಆಗಿ ಮೊದಲ ಎರಡು ವರ್ಷಗಳ ಅವಧಿಗೆ ಮಂಗಳೂರು ಕ್ಷೇತ್ರದ ಶಾಸಕ, ಮಾಜಿ ಸಚಿವ, ವಿರೋಧ ಪಕ್ಷದ ಮಾಜಿ ಉಪನಾಯಕ ಯು. ಟಿ. ಖಾದರ್ ಅವರನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ ಮತ್ತಿತರರು ಸ್ಪೀಕರ್ ಹುದ್ದೆ ಸ್ವೀಕರಿಸಲು ಬಲವಾಗಿ ನಿರಾಕರಿಸಿದ ಬಳಿಕ ಪಕ್ಷದ ವರಿಷ್ಠರು ಖಾದರ್ ಅವರ ಮನವೊಲಿಸಿದರು ಎನ್ನಲಾಗಿದೆ. ಇಂದೇ ಖಾದರ್ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದು, ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ಉನ್ನತ ಮೂಲಗಳ ತಿಳಿಸಿವೆ.
ಮಂಗಳೂರು ಕ್ಷೇತ್ರದಿಂದ ನಿರಂತರವಾಗಿ ಐದು ಬಾರಿ ವಿಜಯಿಯಾಗಿರುವ ಯು. ಟಿ. ಖಾದರ್ ಎರಡು ಬಾರಿ ಸಚಿವರಾಗಿ, ಕಳೆದ ಬಾರಿ ವಿರೋಧ ಪಕ್ಷದ ಉಪನಾಯಕರಾಗಿ ಸಿದ್ದರಾಮಯ್ಯ ಅವರ ಜೊತೆ ಕಾರ್ಯ ನಿರ್ವಹಿಸಿದ್ದರು. ಖಾದರ್ ಅವರ ಅನುಭವ, ಹಿರಿತನ ಹಾಗೂ ಸ್ವಚ್ಛ ರಾಜಕಾರಣ ಪರಿಗಣಿಸಿ ಸ್ಪೀಕರ್‌ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಮೊದಲ ಎರಡು ವರ್ಷಗಳಿಗೆ ಸ್ಪೀಕರ್ ಹುದ್ದೆಯನ್ನು ನಿಭಾಯಿಸುವಂತೆ ಕೇಳಿಕೊಳ್ಳಲಾಗಿದೆ. ಪಕ್ಷದ ನಾಯಕರ ಕೇಳಿಕೆಗೆ ಖಾದರ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮಂಗಳವಾರವೇ ಖಾದರ್ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಲಿದ್ದಾರೆ.





































error: Content is protected !!
Scroll to Top