ಫೇಸ್‌ಬುಕ್‌ನಲ್ಲಿ ಉಚಿತ ಯೋಜನೆಗಳಿಗೆ ಆಗುವ ಸಾಲದ ಲೆಕ್ಕ ನೀಡಿದ್ದ ಶಿಕ್ಷಕ
ಬೆಂಗಳೂರಿನ : ಕಾಂಗ್ರೆಸ್ ಸರಕಾರದ ಉಚಿತ ಯೋಜನೆಗಳನ್ನು ಟೀಕಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದೆ.
ಮೇ 20ರಂದು ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಚಿತ್ರದುರ್ಗ ಜಿಲ್ಲೆಯ ಕಾನುಬೇನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಅವರನ್ನು ಮಾನತುಗೊಳಿಸಲಾಗಿದೆ.
ಸಿದ್ದರಾಮಯ್ಯ 2,42,000 ಕೋಟಿ ರೂ. ಸಾಲ ಮಾಡಿದ್ದಾರೆ. ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಶಾಂತಮೂರ್ತಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ 3,590 ಕೋಟಿ ರೂ., ಧರಂ ಸಿಂಗ್ ಅವರು 15,635 ಕೋಟಿ ರೂ., ಎಚ್.ಡಿ.ಕುಮಾರಸ್ವಾಮಿ ಅವರು 3,545 ಕೋಟಿ ರೂ., ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ 25,653 ಕೋಟಿ ರೂ., ಡಿ.ವಿ.ಸದಾನಂದಗೌಡ ಅವಧಿಯಲ್ಲಿ 9,464 ಕೋಟಿ ರೂ., ಜಗದೀಶ್ ಶೆಟ್ಟರ್ ಅಧಿಕಾರದ ಅವಧಿಯಲ್ಲಿ 13,464, ಸಿದ್ದರಾಮಯ್ಯ ಅವರ ಅವಧಿಯಲ್ಲಿ 2,42,000 ಕೋಟಿ ಸಾಲ ಮಾಡಲಾಗಿದೆ. ಎಸ್‌ಎಂ ಕೃಷ್ಣ ಅವರಿಂದ ಹಿಡಿದ ಜಗದೀಶ್ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರೂಪಾಯಿ. ಆದರೆ ಸಿದ್ದರಾಮಯ್ಯ ಅವರು ಮಾಡಿದ ಸಾಲ 2,42,000 ಕೋಟಿ. ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಫೇಸ್‌ಬುಕ್‌ನಲ್ಲಿ ಶಾಂತಮೂರ್ತಿ ಅವರು ಬರೆದುಕೊಂಡಿದ್ದರು.
ಶಾಂತಮೂರ್ತಿಯನ್ನು ನಾಗರಿಕ ಸೇವಾ ನೀತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತು ಮಾಡಿ ಅವರ ಕಾರ್ಯವೈಖರಿ ಬಗ್ಗೆ ಇಲಾಖಾ ಮಟ್ಟದ ತನಿಖೆಗೂ ಆದೇಶಿಲಾಗಿದೆ.