ಬನವಾಸಿಯ ಕದಂಬರು ಇಲ್ಲದೆ ಕರ್ನಾಟಕದ ಇತಿಹಾಸ ಪೂರ್ಣ ಆಗುವುದಿಲ್ಲ ; ಸಿಎಂ ಬೊಮ್ಮಾಯಿ

ಬನವಾಸಿಯಲ್ಲಿ ಎರಡು ದಿನಗಳ ಕಾಲ ಕದಂಬೋತ್ಸವ

ಶಿರಸಿ: ಕದಂಬರು ಇಲ್ಲದೆ ಕರ್ನಾಟಕದ ಇತಿಹಾಸ ಪೂರ್ಣ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆ.28ರಿಂದ ಎರಡು ದಿನಗಳ ಕಾಲ ನಡೆಯಲಿರುವ ಕದಂಬೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಂಪ ತಮ್ಮ ಸಾಹಿತ್ಯ ಮೂಲಕ ಕನ್ನಡ ಭಾಷೆಗೆ ಮುನ್ನುಡಿ ಬರೆದಿದ್ದಾರೆ. ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಾಗಿದೆ. ಕದಂಬರ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ‌ ಉಜ್ವಲ ಸ್ಥಾನದಲ್ಲಿತ್ತು. ಇಂದಿಗೂ ಬನವಾಸಿ ಕೃಷಿಯಲ್ಲಿ ಫಲವಾದ ಭೂಮಿಯಾಗಿದೆ. ಬನವಾಸಿ ಭಾಗದ ಜನರಿಗಾಗಿ ಏತ ನೀರಾವರಿ ಯೋಜನೆ ಜಾರಿಯಾಗಿದೆ. ಸುಮಾರು 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಶಿವರಾಮ್ ಹೆಬ್ಬಾರ್ ಪ್ರಯತ್ನದಿಂದ ಈ ಯೋಜನೆ ಜಾರಿಯಾಗಿದ್ದು, ಅದಕ್ಕಾಗಿ ಸಚಿವ ಹೆಬ್ಬಾರ್​ಗೆ ಭಗೀರಥ ಎಂದು ಬಿರುದು ಕೊಟ್ಟಿದ್ದೀರಿ ಎಂದರು. ಕಾರ್ಯಕ್ರಮದಲ್ಲಿ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಸಿಎಂ ಬೊಮ್ಮಾಯಿ ಅವರು ಪಂಪ ಪ್ರಶಸ್ತಿ ಪ್ರದಾನ ಮಾಡಿದರು. ಸಾಹಿತ್ಯ, ಪತ್ರಿಕೋದ್ಯಮ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಇವರ ಸೇವೆಯನ್ನು ಗುರುತಿಸಿ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಿ ಇಂದು ಪ್ರದಾನ ಮಾಡಲಾಯಿತು.









































































































































































error: Content is protected !!
Scroll to Top