ಹೆಬ್ರಿ : ಶ್ರೀ ಕ್ಷೇತ್ರ ಪಾಂಡುಕಲ್ಲು ಕೋಟಿನಾಥೇಶ್ವರ ದೇವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿ ಜಾತ್ರಾ ಮಹೋತ್ಸವ ಫೆ. 9 ರಿಂದ 16 ರವರೆಗೆ ಜರುಗಲಿದೆ. ವೇದಮೂರ್ತಿ ಬ್ರಹ್ಮಶ್ರೀ ಹೆರ್ಗ ರಾಘವೇಂದ್ರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.
ಫೆ. 9 ರಂದು ಬೆಳಗ್ಗೆ ಶ್ರೀ ಗುರು ಗಣೇಶ ಪ್ರಾರ್ಥನೆ, ಫಲನ್ಯಾಸ ಪಂಚಗವ್ಯ ಪುಣ್ಯಾಹ, ಆದ್ಯಗಣಯಾಗ, ಕಂಬದ ಮುಹೂರ್ತ ಜರುಗಲಿದೆ. ಫೆ. 10 ರಿಂದ 12 ರವರೆಗೆ ರುದ್ರಾಭಿಷೇಕ ಮತ್ತು ನಿತ್ಯಪೂಜೆ ನಡೆಯಲಿದ್ದು, ಫೆ. 13 ರಂದು ಬೆಳಗ್ಗೆ ಕಾಲಾವಧಿ ದೇವರ ಉತ್ಸವ, ಹಾಲುಹಬ್ಬ, ಪಂಚಗವ್ಯ ಪುಣ್ಯಾಹ, ಶತರುದ್ರಾಭಿಷೇಕ, ನವಕ ಪ್ರಧಾನ ಹೋಮ, ಕಲಾಶಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಏಕದಶ ರುದ್ರಾಭಿಷೇಕ, ಸಂಜೆ 6 ಗಂಟೆಗೆ ವಿವಿಧ ಭಜನ ಮಂಡಳಿಗಳಿಂದ ಭಜನೋತ್ಸವ, 8 ಗಂಟೆಗೆ ದೀವಟಿಗೆ ಸೇವೆ, ಮಹಾಮಂಗಳಾರತಿ, ಗೋಂದುಲು ಸೇವೆ, ಹೂವಿನ ಪೂಜೆ, ಶಿವರಾಯ ಸನ್ನಿಧಿಯಲ್ಲಿ ಮುಂಡಿಗೆ ಪೂಜೆ, ರಾತ್ರಿ 10 ಗಂಟೆಗೆ ಶ್ರೀ ಕೊಡಮಣಿತ್ತಾಯ ಕೋಲ, ರಂಗಪೂಜೆ, ಗರಡಿಯಲ್ಲಿ ಅಗಲು ಸೇವೆ, ಕೆಂಡ ಸೇವೆ ಜರುಗಲಿದೆ.
ಫೆ. 14 ರಂದು ಪಂಚಗವ್ಯ ಪುಣ್ಯಾಹ, ರುದ್ರಾಭಿಷೇಕ, ನವಕಪ್ರಧಾನ ಹೋಮ, ಕಲಾಶಾಭಿಷೇಕ, ಪ್ರಸನ್ನ ಪೂಜೆ, ತುಲಾಭಾರ ಸೇವೆ, ಗರಡಿಯಲ್ಲಿ ಗುಂಡೊಕ್ಲು, ಏಕಾದಶ ರುದ್ರಾಭಿಷೇಕ ಮತ್ತು ಅನ್ನದಾನಸೇವೆ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, 10 ಗಂಟೆಗೆ ಹರಕೆಯ ಶ್ರೀ ಮಾರಿಶಿವರಾಯ ದೈವದ ಕೋಲ, ಜೋಗಿಪುರುಷ ಮತ್ತು ಮೈಂದಳಾಮ್ಮನ ಕೋಲ ನಡೆಯಲಿದೆ. ಫೆ. 15 ರಂದು ರುದ್ರಾಭಿಷೇಕ ಮತ್ತು ನಿತ್ಯಪೂಜೆ, ರಾತ್ರಿ 8:30 ಗಂಟೆಗೆ ಶ್ರೀ ಶಿವರಾಯ ಸನ್ನಿಧಿಯಲ್ಲಿ ಮಾರಿಪೂಜೆ, ಫೆ. 16 ರಂದು ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ಹಾಗೂ ಮಂಗಲಾಚರಣೆ ನಡೆಯಲಿದೆ ಎಂದು ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.