ಕಾರ್ಕಳ : ಆನೆಕೆರೆ ಬಸದಿ ಜೀರ್ಣೊದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಬಸದಿಯ ಜೀರ್ಣೋದ್ಧಾರ ಸಮಿತಿ ಸದಸ್ಯರು ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಗುರುವಾರ ಭೇಟಿಯಾದ ಸಂದರ್ಭ ಸಮಿತಿಗೆ ದೇಣಿಗೆ ಹಸ್ತಾಂತರಿಸಿದರು. ಸಮಿತಿ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಸಂಚಾಲಕ ನೇಮಿರಾಜ್ ಆರಿಗ, ಕೋಶಾಧಿಕಾರಿ ಶೀತಲ್ ಜೈನ್ ಶಿರ್ಲಾಲು, ಮಹೇಂದ್ರ ವರ್ಮ, ಸಂಪತ್ ಕುಮಾರ್ ಹಾಗೂ ಶಶಿಕಾಂತ್ ಹೆಗ್ಡೆ ಈ ಸಂದರ್ಭ ಉಪಸ್ಥಿತರಿದ್ದರು.