ಫೆ.6ರಿಂದ ಕಾಂಗ್ರೆಸ್‌ ಕರಾವಳಿ ಧ್ವನಿ ಯಾತ್ರೆ

ಎರಡು ಹಂತಗಳಲ್ಲಿ ಒಂದು ತಿಂಗಳು ಯಾತ್ರೆ

ಮಂಗಳೂರು : ಕರಾವಳಿಯಲ್ಲಿ ಬಿಜೆಪಿ ಪ್ರಾಬಲ್ಯವನ್ನು ಮುರಿಯಬೇಕೆಂದು ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್‌ ಇದೀಗ ಕರಾವಳಿಗಾಗಿಯೇ ಇತ್ತೀಚೆಗೆ ಪ್ರಜಾಧ್ವನಿ ಮಾದರಿಯಲ್ಲಿ ‘ಕರಾವಳಿ ಧ್ವನಿ ಯಾತ್ರೆ’ ನಡೆಸಲು ನಿರ್ಧರಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಆರು ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ತಿಳಿಸಿದ್ದಾರೆ.
ಫೆ.5ರಿಂದ 9ರ ವರೆಗೆ ಮೊದಲ ಹಂತದ ಕರಾವಳಿ ಧ್ವನಿ ರಥಯಾತ್ರೆ ಆರಂಭವಾಗಲಿದೆ. ಎರಡನೇ ಹಂತದ ರಥಯಾತ್ರೆ ಫೆ.16ರಿಂದ ಮಾರ್ಚ್ 10ರ ವರೆಗೆ ಸಂಚರಿಸಲಿದೆ.
ಕರಾವಳಿ ಧ್ವನಿ ಯಾತ್ರೆಯು ಫೆ.5 ರಂದು ಸುಳ್ಯದಲ್ಲಿ ಆರಂಭಗೊಳ್ಳಲಿದೆ. 30 ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಮಡಿಕೇರಿಯಲ್ಲಿ ಕರಾವಳಿ ಧ್ವನಿ ಯಾತ್ರೆ ನಡೆಯಲಿದೆ‌.‌ ಬಿ.ಕೆ ಹರಿಪ್ರಸಾದ್, ಆರ್.ವಿ ದೇಶಪಾಂಡೆ, ಮಧು ಬಂಗಾರಪ್ಪ ಸೇರಿದಂತೆ ಕರಾವಳಿಯ ಪ್ರಮುಖ ನಾಯಕರು ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.









































































































































































error: Content is protected !!
Scroll to Top