ಕಾರ್ಕಳ: ಎಳ್ಳಾರೆ ಜನಾರ್ದನ ಶಾಲೆಯ ಪೋಷಕರ ಸಭೆ ಬುಧವಾರ ನಡೆಯಿತು. ಶಾಲೆಯ ಅಧ್ಯಕ್ಷ ದಿನೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಪೋಷಕರ ಸಭೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಮಾತೆಯರನ್ನು ಸೇರಿಸಿ ಮಾತೃಭಾರತಿ ರಚನೆ ಮಾಡಲಾಯಿತು.
ಮಾತೃ ಭಾರತಿಯ ಸಂಪೂರ್ಣ ಜವಾಬ್ದಾರಿ ಮತ್ತು ಕಾರ್ಯ ನಿರ್ವಹಣೆಯ ಬಗ್ಗೆ ವಿದ್ಯಾಭಾರತಿ ಉಡುಪಿ ಜಿಲ್ಲೆ ಇದರ ಕಾರ್ಯದರ್ಶಿ ಮತ್ತು ಅಮೃತ ಭಾರತಿ ವಿದ್ಯಾಲಯದ ಹೈಸ್ಕೂಲ್ ವಿಭಾಗದ ಉಪಮುಖ್ಯೋಪಾಧ್ಯಾಯ ಮಹೇಶ್ ಹೈಕಾಡಿ ಸವಿವರವಾಗಿ ತಿಳಿಸಿದರು. ಮಾತೃಭಾರತಿ ಸಮಿತಿಯ ಅಧ್ಯಕ್ಷರಾಗಿ ಸುಪ್ರಿಯಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಅಶ್ವಿನಿ. ಎಸ್. ಹೆಗ್ಡೆ ಮುಖ್ಯೋಪಾಧ್ಯಾಯಿನಿ, ಸಹ ಕಾರ್ಯದರ್ಶಿಯಾಗಿ ಪ್ರತಿಮಾ, ಉಪಾಧ್ಯಕ್ಷರಾಗಿ ಅನಿತಾ ಅವರನ್ನು ಆಯ್ಕೆ ಮಾಡಲಾಯಿತು.
ಮಾತೃಭಾರತಿ ಸಮಿತಿಯ ಪದಾಧಿಕಾರಿ ಸದಸ್ಯರು: ಅಕ್ಷತಾ, ವಿದ್ಯಾ ವಾಗ್ಲೆ, ಆಶಾ, ಉಮಾ ನಾಯಕ್, ಪ್ರಣಮ್ಯ, ಸೌಮ್ಯ, ಪ್ರೇಮಲತಾ, ರೇಷ್ಮಾ, ಸವಿತಾ, ವಿನೋದ.
ಅಕ್ಷತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷೆ ಪ್ರಿಯಾ ಯೋಗಿಶ್ ಮಲ್ಯ ಉಪಸ್ಥಿತರಿದ್ದರು.
