ಕಾರ್ಕಳ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರ ಬಿಡುಗಡೆ

ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್‌ ಕಾರ್ಕಳ ತಾಲೂಕು ಘಟಕದ ವತಿಯಿಂದ ಫೆ. ೧೨ ರಂದು ಎಸ್.ವಿ.ಟಿ. ವಿದ್ಯಾ ‌ ಸಂಸ್ಥೆಯ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಭಾಭವನದಲ್ಲಿ ನಡೆಯುವ ಕಾರ್ಕಳ ತಾಲೂಕು ೧೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಜ. 24ರಂದು ಬಿಡುಗಡೆಗೊಳಿಸಲಾಯಿತು.
ಪುರಸಭೆಯ ಅಧ್ಯಕ್ಷೆ ಸುಮಾ ಕೇಶವ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಕೋಶಾಧಿಕಾರಿ ಮನೋಹರ ಪಿ., ‌ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಕೆ.ಪಿ. ಶೆಣೈ, ಸಂಚಾಲಕ ಎಸ್. ನಿತ್ಯಾನಂದ ಪೈ, ಸಮಿತಿಯ ಉಪಾಧ್ಯಕ್ಷರಾದ ಪ್ರೊ. ಬಿ. ಪದ್ಮನಾಭ ಗೌಡ, ಮೋಹನ್ ಪಡಿವಾಳ್, ರಾಮದಾಸ್ ಪ್ರಭು, ಯೋಗೇಂದ್ರ ನಾಯಕ್, ಉಷಾ ನಾಯಕ್, ಕಾರ್ಕಳ ಕ.ಸಾ.ಪ. ಕೋಶಾಧಿಕಾರಿ ಅರುಣ್ ರಾವ್ ಮುಂಡ್ಕೂರು, ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲು, ಸಂಘಟನಾ ಕಾರ್ಯದರ್ಶಿ ಗಿರೀಶ್ ರಾವ್, ಪದಾಧಿಕಾರಿಗಳಾದ ಎಸ್. ರಾಮ ಭಟ್, ಕೆ.ಕೆ. ನಂಬಿಯಾರ್, ಸದಾನಂದ ಪೈ, ಕೆ. ಶಿವಾನಂದ, ದೇವುದಾಸ್ ನಾಯಕ್, ಜಯಂತಿ ಶೆಟ್ಟಿ, ಡಾ. ಸುಮತಿ ಪಿ., ರಮಿತಾ ಶೈಲೇಂದ್ರ ರಾವ್, ಸುಲೋಚನಾ ಬಿ.ವಿ., ಮಾಲತಿ ಜಿ. ಪೈ, ಮನಿಷಾ ಕಾಮತ್, ವಿಜಯ ಹೆಗ್ಡೆ, ಹರೀಶ್ ಕೆ. ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಸಾಹಿತಿ ಹೆಚ್. ಚಂದ್ರ ಶೇಖರ ಕೆದ್ಲಾಯ ಅವರಿಗೆ ಇದೇ ಸಂದರ್ಭ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ವಂದಿಸಿದರು.

Latest Articles

error: Content is protected !!