ಮಹದಾಯಿ ವಿವಾದ : ಯಾವುದೇ ರೀತಿಯಲ್ಲಿ ಹೋರಾಡಲು ನಾವು ಸಿದ್ಧ – ಗೋವಾ ಸಿಎಂ

ಪಣಜಿ : ಮಹದಾಯಿಗಾಗಿ ಯಾವುದೇ ಮಾರ್ಗದಲ್ಲಿಯಾದರೂ ಹೋರಾಡಲು ನಾವು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರು ಏನೇ ಹೇಳಿದರು ನಮ್ಮ ನಿರ್ಧಾರದಲ್ಲಿ ನಾವು ದೃಢವಾಗಿದ್ದೇವೆ. ಮಹದಾಯಿಗಾಗಿ ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ತಾಂತ್ರಿಕವಾಗಿ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಾವು ಕೈಗೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಹದಾಯಿ ಯೋಜನೆ ಕುರಿತು ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿಯವರು, ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸರಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಈಗಾಗಲೇ ಯೋಜನೆಯ ಸಮಗ್ರ ಪರಿಷ್ಕೃತ ವರದಿಗೆ ಅನುಮೋದನೆ ಸಿಕ್ಕಿದೆ. ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹದಾಯಿ ನ್ಯಾಯಾಧೀಕರಣ ರಚನೆಯಾಗಿದೆ. 10 ವರ್ಷ ನ್ಯಾಯಾಧೀಕರಣದ ವಿಚಾರಣೆ ನಡೆದು ಆದೇಶ ಬಂದಿದೆ. ನ್ಯಾಯಾಧೀಕರಣದ ಆದೇಶ ಎಂದರೆ ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದ್ದಂತೆ. ಈ ಆದೇಶದ ಆಧಾರದ ಮೇಲೆ ನಾವು ಡಿಪಿಅರ್ ಮಾಡಿದ್ದೇವೆ. ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Latest Articles

error: Content is protected !!